Advertisement

ಅಮೆರಿಕದಿಂದ ಭಾರತಕ್ಕೆ ಗೂಗಲ್‌ ಪೇ ಮೂಲಕ ಹಣ ರವಾನೆ ಸಾಧ್ಯ

12:13 AM May 12, 2021 | Team Udayavani |

ವಾಷಿಂಗ್ಟನ್‌: ಇನ್ನು ಮುಂದೆ ಅಮೆರಿಕದಲ್ಲಿರುವ ಗೂಗಲ್‌ ಪೇ ಬಳಕೆದಾರರು ಭಾರತ ಮತ್ತು ಸಿಂಗಾಪುರದಲ್ಲಿರುವ ಜಿಪೇ ಬಳಕೆದಾರರಿಗೆ ಹಣವನ್ನು ರವಾನಿಸಬಹುದು.

Advertisement

ವೆಸ್ಟರ್ನ್ ಯೂನಿಯನ್‌ ಹಾಗೂ ವೈಸ್‌ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಗೂಗಲ್‌ ಇಂಥದ್ದೊಂದು ಸೌಲಭ್ಯವನ್ನು ಒದಗಿಸಿದೆ. ಸದ್ಯಕ್ಕೆ ಭಾರತ ಮತ್ತು ಸಿಂಗಾಪುರದ ವ್ಯಕ್ತಿಗಳಿಗೆ ಗೂಗಲ್‌ ಪೇ ಮೂಲಕ ದುಡ್ಡು ಕಳುಹಿಸುವ ಅಕಾಶ ಅಮೆರಿಕದಲ್ಲಿ ಇರುವವರಿಗೆ ಮಾತ್ರ ಸಿಕ್ಕಿದೆ.

ವರ್ಷಾಂತ್ಯದಲ್ಲಿ ಇನ್ನಷ್ಟು ದೇಶಗಳಿಗೆ ಇದನ್ನು ವಿಸ್ತರಿಸಲಾಗುತ್ತದೆ ಎಂದು ಗೂಗಲ್‌ ತಿಳಿಸಿದೆ. ಆದರೆ, ಭಾರತದಿಂದ ಅಮೆರಿಕ ಅಥವಾ ಬೇರೆ ದೇಶಕ್ಕೆ ಹಣ ರವಾನಿಸಲು ಆಗುವುದಿಲ್ಲ.ಅಮೆರಿಕದಲ್ಲಿನ ಗೂಗಲ್‌ ಪೇ ಬಳಕೆದಾರರು ಭಾರತದ ವ್ಯಕ್ತಿಗೆ ಹಣ ರವಾನಿಸುವಾಗ, ಆ್ಯಪ್‌ ನಲ್ಲಿ ಯಾವ ಪೇಮೆಂಟ್‌ ಪ್ರೊವೈಡರ್‌ (ವೆಸ್ಟರ್ನ್ ಯೂನಿಯನ್‌ ಅಥವಾ ವೈಸ್‌) ಮೂಲಕ ರವಾನಿಸಬೇಕು ಎಂಬ ಆಯ್ಕೆಯನ್ನೂ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next