Advertisement

ಫೇಸ್‌ಬುಕ್‌ ಮಂಡಿಸಿರುವ ಪ್ರಸ್ತಾವನೆಗೆ ಗೂಗಲ್‌ ಸಂಸ್ಥೆ ವಿರೋಧ

10:37 PM Aug 12, 2022 | Team Udayavani |

ನವದೆಹಲಿ: ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ನೀಡುವ ದೂರು ದುಮ್ಮಾನಗಳನ್ನು ಆಲಿಸಲು, ಸಾಮಾಜಿಕ ಜಾಲತಾಣಗಳ ಪ್ರತಿನಿಧಿಗಳೇ ಇರುವ ಸ್ವ-ನಿಯಂತ್ರಣ ಮಂಡಳಿಯೊಂದನ್ನು ಸ್ಥಾಪಿಸಬೇಕೆಂದು ಫೇಸ್‌ಬುಕ್‌ ಸಂಸ್ಥೆ ಮಂಡಿಸಿರುವ ಪ್ರಸ್ತಾವನೆಗೆ ಗೂಗಲ್‌ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ.

Advertisement

ಜೂನ್‌ನಲ್ಲಿ ಕೇಂದ್ರ ಸರ್ಕಾರ ಪ್ರಸ್ತಾವನೆಯೊಂದನ್ನು ಮಂಡಿಸಿದ್ದು, ಅದರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಚಾರಗಳ ಮೇಲೆ ನಿಗಾ ಇಡಲು, ಬಳಕೆದಾರರ ಕುಂದುಕೊರತೆಗಳನ್ನು ಪರಿಹರಿಸಲು ಸರ್ಕಾರದಿಂದ ನಿಯೋಗವೊಂದನ್ನು ರಚಿಸುವ ಅವಶ್ಯಕತೆಯ ಬಗ್ಗೆ ಉಲ್ಲೇಖಿಸಿತ್ತು. ಆದರೆ, ಫೇಸ್‌ಬುಕ್‌ ಸಂಸ್ಥೆಯು, ಖಾಸಗಿ ನಿಯೋಗ ಸ್ಥಾಪನೆಯ ಪ್ರಸ್ತಾವನ್ನು ಮುಂದಿಟ್ಟಿದೆ. ಈ ಪ್ರಸ್ತಾವನೆಯನ್ನು ಟ್ವಿಟರ್‌ ಕೂಡ ಬೆಂಬಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next