Advertisement

ಜಿಮೇಲ್ ಆ್ಯಪ್ ನಲ್ಲೇ ಲಭ್ಯವಿದೆ ಗೂಗಲ್ ಮೀಟ್: ವಿಶೇಷತೆಗಳೇನು ?

04:26 PM Sep 12, 2020 | Mithun PG |

ನವದೆಹಲಿ: ಗೂಗಲ್ ಮೀಟ್ ಇದೀಗ  ಆ್ಯಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಹೊಸ ಅಪ್ ಡೇಟ್ ಒಂದನ್ನು ಜಾರಿಗೆ ತಂದಿದೆ. ಇನ್ನು ಮುಂದೆ  ಜಿಮೇಲ್ ಅಪ್ಲಿಕೇಶನ್ ನಲ್ಲಿ ಗೂಗಲ್ ಮೀಟ್ ಅನ್ನು ಬಳಸಬಹುದು.

Advertisement

ಹೌದು. ಇನ್ನು ಸ್ಮಾರ್ಟ್ ಪೋನ್ ನಲ್ಲಿ ಗೂಗಲ್ ಮೀಟ್ ಆ್ಯಪ್ ಡೌನ್ ಲೋಡ್ ಮಾಡಬೇಕೆಂದಿಲ್ಲ. ನೇರವಾಗಿ ಇನ್ ಬಿಲ್ಟ್ ಆ್ಯಪ್ ಆಗಿರುವ ಜಿಮೇಲ್ ನಲ್ಲೇ ಈ ಫೀಚರ್ ಲಭ್ಯವಿದೆ. ಅದಾಗ್ಯೂ ಜಿಮೇಲ್  ಆ್ಯಪ್ ನಲ್ಲಿ ಜಾಯಿನ್ ಮೀಟಿಂಗ್ ಮತ್ತು ನ್ಯೂ ಮೀಟಿಂಗ್ ನ ಜೊತೆಗೆ ಇತರ ಆಯ್ಕೆಯೂ ಲಭ್ಯವಿದೆ. ನ್ಯೂ ಮೀಟಿಂಗ್ ಆಯ್ಕೆಯನ್ನು ಒತ್ತಿದಾಗ ಹೆಚ್ಚಿನ ಹೊಸ ಫೀಚರ್ ಗಳು ಕಂಡುಬರುತ್ತವೆ. ಇದರಲ್ಲಿ Get a Meeting link to share, Start an instant meeting ಮತ್ತು Schedule in Google Calendar ಆಯ್ಕೆ ದೊರೆಯುತ್ತದೆ.

ಹೊಸ ಫೀಚರ್ ಪ್ರಕಾರ ಭಾಗಿಯಾಗಬೇಕಾದ ಎಲ್ಲಾ ಮೀಟಿಂಗ್ ಗಳನ್ನು ಹೋ ಸ್ಕ್ರೀನ್ ನಲ್ಲಿ ಶೆಡ್ಯೂಲ್ ಮಾಡಿಡಬಹುದು. ಸಮಯಕ್ಕೆ ಸರಿಯಾಗಿ ಟ್ಯಾಪ್ ಮಾಡಿ ಮೀಟಿಂಗ್ ಗೆ ಜಾಯಿನ್ ಆಗಬಹುದು.

ಹೊಸ ವಿನ್ಯಾಸದ ಗೂಗಲ್ ಮೀಟ್, G suite ಮತ್ತು ಗೂಗಲ್ ಬಳಕೆದಾರರಿಗೆ ಲಭ್ಯವಿದೆ. ಈ ವರ್ಷದ ಆರಂಭದಲ್ಲಿ ಗೂಗಲ್, ಮೀಟ್ ಆ್ಯಪ್ ಅನ್ನು ಪರಿಚಯಿಸಿತ್ತು. ಇದೀಗ ಜಿಮೇಲ್ ನಲ್ಲಿ ಮೀಟ್ ಶಾರ್ಟ್ ಕಟ್ ಲಭ್ಯವಿದ್ದು, ಯಾವುದೇ ಮೀಟಿಂಗ್ ಗೆ ಸುಲಭವಾಗಿ ಜಾಯಿನ್ ಆಗಬಹುದು. ಆ್ಯಂಡ್ರಾಯ್ಡ್ ಮತ್ತು  ಐಓಎಸ್ ಬಳಕೆದಾರರಿಗೆ ಈ ಆಯ್ಕೆ ದೊರೆಯುತ್ತಿದ್ದು, ಬಲಭಾಗದಲ್ಲಿ ಮೀಟ್ ಆಯ್ಕೆ ಮತ್ತು ಎಡಭಾಗದಲ್ಲಿ ಮೇಲ್ ಆಯ್ಕೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next