Advertisement

ಗೂಗಲ್‌ ಮ್ಯಾಪ್‌ನಲ್ಲಿ ಟೋಲ್‌ ಮೊತ್ತ

05:04 PM Jul 05, 2022 | Team Udayavani |

ಹೊಸದಿಲ್ಲಿ: ಗೂಗಲ್‌ ಮ್ಯಾಪ್‌ನಲ್ಲಿ ರಸ್ತೆಯ ಟ್ರಾಫಿಕ್‌ ಬಗ್ಗೆ ಮಾಹಿತಿ ಸಿಗುವುದು ಹಳೆಯ ವಿಚಾರ. ಆದರೆ ಇನ್ನು ಮುಂದೆ ಗೂಗಲ್‌ ಮ್ಯಾಪ್‌ನಲ್ಲಿ ಟೋಲ್‌ಗ‌ಳ ಮೊತ್ತವೂ ಮೊದಲೇ ಗೊತ್ತಾಗಲಿದೆ.  ನೀವು ಯಾವ ಊರಿಗೆ ತೆರಳಬೇಕು ಎಂದು ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಕೊಟ್ಟಿರುತ್ತೀರೋ ಆ ಊರಿಗೆ ದಾರಿ ತೋರಿಸುವ ಗೂಗಲ್‌ ಮ್ಯಾಪ್‌, ಆ ರಸ್ತೆಯಲ್ಲಿ ಹೋದರೆ ಒಟ್ಟು ಎಷ್ಟು ಹಣವನ್ನು ಟೋಲ್‌ ರೂಪದಲ್ಲಿ ಕೊಡಬೇಕಾಗುತ್ತದೆ ಎನ್ನುವುದನ್ನೂ ತೋರಿಸಲಿದೆ. ದಿನ, ಸಮಯ ಹೀಗೆ ಹಲವು ವಿಚಾರಕ್ಕೆ ತಕ್ಕಂತೆ ಆ ಮೊತ್ತವನ್ನೂ ಗೂಗಲ್‌ ಮ್ಯಾಪ್‌ ಬದಲಾಯಿಸುತ್ತದೆ.

Advertisement

ಟೋಲ್‌ ಇರುವ ರಸ್ತೆಯಲ್ಲಿ ಹೋಗುವುದು ಬೇಡವೆಂದು ನೀವು ನಿರ್ಧರಿಸಿದರೆ ಅದಕ್ಕೂ ಗೂಗಲ್‌ ಮ್ಯಾಪ್‌ ದಾರಿ ನೀಡುತ್ತದೆ. ಮ್ಯಾಪ್‌ನಲ್ಲಿರುವ 3 ಚುಕ್ಕಿಯನ್ನು ಒತ್ತಿದರೆ, “ಅವಾಯ್ಡ ಟೋಲ್‌’ ಎನ್ನುವ ಆಯ್ಕೆ ಸಿಗುತ್ತದೆ. ಅದನ್ನು ಆಯ್ಕೆ ಮಾಡಿ ಕೊಂಡರೆ ಟೋಲ್‌ ಪ್ಲಾಜಾಗಳನ್ನು ತಪ್ಪಿಸಿ ಬೇರೆ ಯಾವ ರಸ್ತೆಯಲ್ಲಿ ಹೋಗ ಬಹುದು ಎನ್ನುವುದನ್ನು ಗೂಗಲ್‌ ಮ್ಯಾಪ್‌ ತೋರಿಸಲಿದೆ. ಸದ್ಯ ಭಾರತ, ಅಮೆರಿಕ, ಇಂಡೋನೇಶ್ಯಾ ಮತ್ತು ಜಪಾನ್‌ನ 2000 ಟೋಲ್‌ ರಸ್ತೆಗಳಿಗೆ ಈ ಸೌಲಭ್ಯ ಲಭ್ಯವಿರುವುದಾಗಿ ಗೂಗಲ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next