Advertisement

Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

12:34 PM May 25, 2024 | Team Udayavani |

ತಿರುವನಂತಪುರಂ: ಪ್ರವಾಸಿ ತಾಣಕ್ಕೆ ತೆರಳಲು ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟ ಪ್ರವಾಸಿಗರ ಕಾರೊಂದು ಹೊಳೆಗೆ ಧುಮುಕಿದ ಘಟನೆ ದಕ್ಷಿಣ ಕೇರಳದ ಕುರುಪ್ಪಂಥಾರ ಬಳಿ ಸಂಭವಿಸಿದೆ.

Advertisement

ಹೈದರಾಬಾದ್ ಮೂಲದ ನಾಲ್ವರ ಪ್ರವಾಸಿಗರ ತಂಡ ಶುಕ್ರವಾರ ತಡರಾತ್ರಿ ಕೇರಳದ ಅಲಪ್ಪುಳ ಕಡೆಗೆ ಹೋಗುತ್ತಿದ್ದಾಗ ಕೊಟ್ಟಾಯಂನ ಕುರುಪಂತರದಲ್ಲಿ ಮುಂಜಾನೆ 3 ಗಂಟೆಗೆ ಈ ಘಟನೆ ನಡೆದಿದೆ.

ಕೇರಳದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಪ್ರವಾಸಿಗರಿಗೆ ರಸ್ತೆ ಗೊತ್ತಾಗದ ಹಿನ್ನೆಲೆಯಲ್ಲಿ ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟಿದ್ದಾರೆ ಈ ವೇಳೆ ಗೂಗಲ್ ಮ್ಯಾಪ್ ಅನುಕರಿಸಿ ಹೋಗಿ ಕಾರು ಹೊಳೆಗೆ ಧುಮುಕಿದೆ. ಆದರೆ ಕಾರಿನಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತು ಕಾರು ಹೊಳೆಗೆ ದುಮುಕುತಿದ್ದಂತೆ ಅಲ್ಲಿನ ಸ್ಥಳೀಯರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ರಕ್ಷಣೆಗೆ ಮುಂದಾಗಿದ್ದಾರೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಕಾರಿನಲ್ಲಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಹಲವು ಬಾರಿ ಅವಘಡ ಸಂಭವಿಸಿರುವ ಹೊಳೆಗೆ ಇಂದಿಗೂ ತಡೆಗೋಡೆ ಇಲ್ಲದಿರುವುದು ಅಪಘಾತ ಮರುಕಳಿಸಲು ಕಾರಣ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಇದನ್ನೂ ಓದಿ: Channagiri; ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಚನ್ನಗಿರಿಯಲ್ಲಿ ಬಿಗಿ ಬಂದೋಬಸ್ತ್

Advertisement
Advertisement

Udayavani is now on Telegram. Click here to join our channel and stay updated with the latest news.

Next