Advertisement

ಚಾಟಿಂಗ್‌ ಪ್ರಿಯರಿಗೆ ವೇದಿಕೆಯಾಗಿದ್ದ ಹ್ಯಾಂಗ್‌ಔಟ್‌ಗೆ ಗೂಗಲ್‌ ವಿದಾಯ

11:12 AM Nov 03, 2022 | Team Udayavani |

ವಾಷಿಂಗ್ಟನ್‌: ಸುಮಾರು ಒಂದು ದಶಕದಿಂದ ಚಾಟಿಂಗ್‌ ಪ್ರಿಯರಿಗೆ ವೇದಿಕೆಯಾಗಿದ್ದ ಗೂಗಲ್‌ ಹ್ಯಾಂಗ್‌ಔಟ್‌ಗೆ ಈಗ ಗುಡ್‌ಬೈ ಹೇಳುವ ಸಮಯ ಬಂದಿದೆ.

Advertisement

ಗೂಗಲ್‌ ಸಂಸ್ಥೆಯು ತನ್ನ ಹ್ಯಾಂಗ್‌ಔಟ್‌ ವೆಬ್‌ ಆ್ಯಪ್‌ ಅನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಜುಲೈನಿಂದಲೇ ಆ್ಯಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಈ ಆ್ಯಪ್‌ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಹ್ಯಾಂಗ್‌ಔಟ್ಸ್‌.ಗೂಗಲ್‌.ಕಾಂ ಬದಲು ಚಾಟ್‌.ಗೂಗಲ್‌.ಕಾಮ್‌ಗೆ ಬದಲಾಗುವಂತೆ ಗ್ರಾಹಕರಿಗೆ ಗೂಗಲ್‌ ಸಲಹೆ ನೀಡಿದೆ.

ಹ್ಯಾಂಗ್‌ಔಟ್‌ನಲ್ಲಿರುವ ದತ್ತಾಂಶಗಳನ್ನ ಬಳಕೆದಾರರು ಗೂಗಲ್‌ ಟೇಕ್‌ಔಟ್‌ ಬಳಸಿಕೊಂಡು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಜತೆಗೆ, ತಮ್ಮ ಡೇಟಾವನ್ನು ಸೇವ್‌ ಮಾಡಿಕೊಳ್ಳಬೇಕು. 2023ರ ಜನವರಿಯಿಂದ ಈ ದತ್ತಾಂಶಗಳು ಬಳಕೆದಾರರಿಗೆ ಲಭ್ಯವಾಗಲಿದೆ ಎಂದೂ ಗೂಗಲ್‌ ಹೇಳಿದೆ.

ಇದನ್ನೂ ಓದಿ : ಹರಿಕಥೆಗಳಲ್ಲಿ ನವರಸಗಳನ್ನು ಉಣಬಡಿಸುತ್ತಿದ್ದ ಅಚ್ಯುತ ದಾಸರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next