Advertisement

“ಅಮೆರಿಕದ ಹಿತಾಸಕ್ತಿಗೆ ಗೂಗಲ್‌’

06:03 AM Mar 29, 2019 | Team Udayavani |

ವಾಷಿಂಗ್ಟನ್‌: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿಯಾದ ಗೂಗಲ್‌, ಅಮೆರಿಕದ ಹಿತಾಸಕ್ತಿಗೆ ಬದ್ಧವಾಗಿದ್ದು, ಚೀನ ಸೈನ್ಯದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲವೆಂದು ಮನವರಿಕೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ವೈಟ್‌ಹೌಸ್‌ನಲ್ಲಿ ಗೂಗಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್‌ ಪಿಚೈ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಟ್ರಂಪ್‌, “ಪಿಚೈ ಜತೆಗಿನ ಭೇಟಿಯ ವೇಳೆ, ಅಮೆರಿಕದ ರಾಜಕೀಯ, ಇನ್ನಿತರ ಕ್ಷೇತ್ರಗಳಿಗೆ ಗೂಗಲ್‌ ಕೊಡಬಹುದಾದ ಕೊಡುಗೆಗಳ ಬಗ್ಗೆ ಚರ್ಚಿಸಲಾಯಿತು’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next