ನವದೆಹಲಿ: ಗಣರಾಜ್ಯೋತ್ಸವದ ಸಂಭ್ರಮ ಗೂಗಲ್‌ನಲ್ಲೂ ಕಂಡುಬಂದಿದೆ. ಅದರ ಡೂಡಲ್‌ನಲ್ಲಿ 74ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೈಯಿಂದ ಕಾಗದದ ಹಾಳೆಯಲ್ಲಿ ಬಿಡಿಸಿದ ಏಕವರ್ಣದ ಚಿತ್ರವನ್ನು ಪ್ರಕಟಿಸಲಾಗಿದೆ.
ಗುಜರಾತ್‌ನ ಅಹ್ಮದಾಬಾದ್‌ನ ಚಿತ್ರಕಲಾವಿದ ಪಾರ್ಥ್ ಕೊಥೇಕರ್ ಈ ಸುಂದರ ಚಿತ್ರವನ್ನು ರಚಿಸಿದ್ದಾರೆ. ಹಾಳೆಯಲ್ಲಿನ ಪ್ರತೀ ಅಕ್ಷರಗಳನ್ನು ರೂಪಿಸುವಾಗಲೂ ಅದನ್ನು ಸುಂದರವಾಗಿ, ಸೂಕ್ಷ್ಮವಾಗಿ ಕತ್ತರಿಸಲಾಗಿದೆ. ಚಿತ್ರ ಮುಗಿದಾಗ ಅದರಲ್ಲಿ ಅದರಲ್ಲಿ ಗೂಗಲ್‌ನ ಇಂಗ್ಲಿಷ್ ಅಕ್ಷರಗಳೂ ಕಾಣಿಸುತ್ತವೆ. ಹಾಗೆಯೇ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್‌ಪಿಎಫ್ ತುಕಡಿ ಪಥಸಂಚಲನ ನಡೆಸುತ್ತಿರುವುದು, ಒಂದು ಬೈಕ್‌ನಲ್ಲಿ ಹಲವು ಯೋಧರು ಸಾಹಸ ಮಾಡುತ್ತಿರುವುದೆಲ್ಲ ರಚನೆಯಾಗಿದೆ.
1950ರ ಇದೇ ದಿನ ಭಾರತ ಸರ್ಕಾರ ಸಂವಿಧಾನವನ್ನು ಅಳವಡಿಸಿಕೊಂಡಿತು. ತನ್ನನ್ನು ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯ ಎಂದು ಕರೆದುಕೊಂಡಿತು ಎಂದು ಗೂಗಲ್ ತಿಳಿಸಿದೆ.
ಇದನ್ನೂ ಓದಿ: ಚಳಿಗಾಲದ ಹಿನ್ನೆಲೆ ಮುಚ್ಚಲಾಗಿದ್ದ ಬದರೀನಾಥ ದೇಗುಲ ಏ.27ಕ್ಕೆ ತೆರೆಯಲು ನಿರ್ಧಾರ