Advertisement

ರಿಕ್ಮನ್‌ಗೆ ಗೂಗಲ್‌ ಡೂಡಲ್‌ ನಮನ

10:05 PM Apr 30, 2023 | Team Udayavani |

ಲಂಡನ್‌:”ಲೆಸ್‌ ಲೈಸೆನ್ಸ್‌ ಡೇಂಜರೆಸ್‌” ಎನ್ನುವ ಖ್ಯಾತ ಬ್ರಿಟಿಷ್‌ ನಾಟಕದಲ್ಲಿ ಸೆಬಾಸ್ಟಿಯನ್‌ ವಾಲ್ಮಂಟ್‌ ಪಾತ್ರದಲ್ಲಿ ಅಭಿನಯಿಸಿದ್ದ ಬ್ರಿಟಿಷ್‌ ಕಲಾರಂಗದ ದಂಥಕತೆ ಅಲಾನ್‌ ರಿಕ್ಮನ್‌ ಅವರಿಗೆ ಗೂ,ಗಲ್‌ ಅದೇ ಪಾತ್ರದ ಮೂಲಕ ಗೌರವ ನಮನ ಸಲ್ಲಿಸಿದೆ. ಬ್ರಿಟಿಷ್‌ ನೆಲದ ಅತೀ ಉತ್ತಮ ನಾಟಕಗಳ ಪೈಕಿ ಒಂದಾಗಿರುವ ಲೆಸ್‌ ಲೈಸೆನ್ಸ್‌ ಡೇಂಜರೆಸ್‌, 1987ರ ಏಪ್ರಿಲ್‌ 30ರಂದು ತೆರೆ ಕಂಡಿತ್ತು. ಈ ಹಿನ್ನೆಲೆ ನಾಟಕದ ವಾರ್ಷಿಕೋತ್ಸವದ ನಿಮಿತ್ತ, ನಾಟಕದ ಪ್ರಮುಖ ಪಾತ್ರಧಾರಿಯಾಗಿರುವ ವಾಲ್ಮಂಟ್‌ ಪಾತ್ರವನ್ನು ಗೂಗಲ್‌ ತನ್ನ ಡೂಡಲ್‌ನಲ್ಲಿ ರಚಿಸಿದೆ. ಹ್ಯಾರಿ ಪಾಟರ್‌ ಸರಣಿಚಿತ್ರದ ಬಳಿಕ ರಿಕ್ಮನ್‌ ಅತ್ಯಂತ ನೈಜ್ಯವಾಗಿ, ಜನಮನೆಸೂರೆಗೊಂಡಿದ್ದ ವಾಲ್ಮಂಟ್‌ ಪಾತ್ರಕ್ಕೆ ಪ್ರತ್ಯೇಕ ಅಭಿಮಾನಿಗಳೇ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next