Advertisement

2021; ಹೊಸ ವರ್ಷಕ್ಕೆ ಗೂಗಲ್ ಡೂಡಲ್ ವಿಭಿನ್ನ ವಿನ್ಯಾಸ

02:11 PM Dec 31, 2020 | Team Udayavani |

ನವದೆಹಲಿ: 2020ಕ್ಕೆ ಗುಡ್ ಬಾಯ್ ಹೇಳಿ 2021ಕ್ಕೆ ಕಾಲಿಡಲು ಎಲ್ಲರೂ ತುದಿಗಾಲಿನಲ್ಲಿರುವಾಗಲೇ ವಿಶ್ವದ ಸರ್ಚ್ ಇಂಜಿನ್ ದೈತ್ಯ ಗೂಗಲ್ ವಿಭಿನ್ನ ವಿನ್ಯಾಸದ ಡೂಡಲ್ ಅನ್ನು ವಿನ್ಯಾಸಗೊಳಿಸುವ ಮೂಲಕ ಇನ್ನೇನು ಹೊಸ ವರ್ಷ ಆರಂಭಗೊಳ್ಳಲು ಕ್ಷಣಗಣನೆ ಪ್ರಾರಂಭಗೊಂಡಿದೆ ಎಂಬುದನ್ನು ನೆನಪಿಸಿದೆ.

Advertisement

ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ  ಈ ಡೂಡಲ್ ನಲ್ಲಿ ಗೂಗಲ್ ಎಂದು ಬರೆಯಲಾದ ಪದಗಳ ಸುತ್ತ ವರ್ಣರಂಜಿವಾದ ಲೈಟಿಂಗ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಹಾಗೂ ಮಧ್ಯಭಾಗದಲ್ಲಿ ಮನೆಯಾಕಾರದ ವಿನ್ಯಾಸದೊಂದಿಗೆ ಗಡಿಯಾರವೊಂದನ್ನು ಇಡಲಾಗಿದೆ. ಮತ್ತು ಕೆಳಭಾಗದಲ್ಲಿ 2020 ಎಂದು ಬರೆಯಲಾಗಿದೆ.

ಇದನ್ನೂ ಓದಿ:ಸರ್ಕಾರದಿಂದಲೇ ವಿಷ್ಣುವರ್ಧನ್‌ ಜಯಂತಿ ಆಚರಣೆಗೆ ಒತ್ತಾಯ

ಕೋವಿಡ್ ಮಾಹಾಮಾರಿಯ ಹೊಡೆತದಿಂದ ಹೈರಾಣಾಗಿರುವ ಜನತೆ ಹೊಸ ವರ್ಷದ ಮೂಲಕ ಹೊಸ ಬದುಕಿನ ಹಂಬಲದಲ್ಲಿರುವಾಗಲೇ ಗೂಗಲ್ ಸಂಸ್ಥೆ ಮುಂಬರುವ ಹೊಸ ವರ್ಷದ ಸಂಭ್ರಮಕ್ಕೆ ತಾನೂ ಕೈ ಜೋಡಿಸಿದೆ.

ಜೊತೆಗೆ ಈ ವರ್ಷದ ಕೊನೆಯ ದಿನದ ಶುಭಾಶಯವನ್ನೂ ಕೂಡಾ ತಿಳಿಸುವ ಮೂಲಕ ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭಗೊಂಡಿದೆ, ಗಡಿಯಾರದ ಮುಳ್ಳುಗಳು ಮಧ್ಯರಾತ್ರಿಯನ್ನು ದಾಟಿದ ತಕ್ಷಣ ಹೊಸ ವರ್ಷದ ಸುಂದರ ರೆಕ್ಕೆಗಳು ಬಿಚ್ಚಿಕೊಳ್ಳುತ್ತದೆ ಎಂದಿದೆ.

Advertisement

ಗೂಗಲ್  ಹಿಂದಿನಿಂದಲೂ ವಿಶೇಷ ದಿನಗಳನ್ನು ತನ್ನ ವಿಭಿನ್ನ ವಿನ್ಯಾಸ ಡೂಡಲ್ ಗಳಿಂದ  ಸ್ಮರಿಸುತ್ತಿದ್ದು, ಸಂಭ್ರಮಾಚರಣೆ ಸೇರಿದಂತೆ , ಎಲ್ಲಾ ಕ್ಷೇತ್ರಗಳ ವಿಶೇಷ ಸಾಧನೆಗಳಿಗೆ ತಕ್ಕಂತೆ ವಿಭಿನ್ನ ಡೂಡಲ್ ಗಳನ್ನು ವಿನ್ಯಾಸಗೊಳಿಸುತ್ತಾ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next