ನವದೆಹಲಿ : ಆ್ಯಂಡ್ರಾಯ್ಡ ಮಾರುಕಟ್ಟೆಯಲ್ಲಿನ ತನ್ನ ಪ್ರಾಬಲ್ಯವನ್ನು ಗೂಗಲ್ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ನೀಡಿರುವ ತೀರ್ಪು ಹಾಗೂ ದಂಡವನ್ನು ಪ್ರಶ್ನಿಸಿ, ಗೂಗಲ್ ಶೀಘ್ರವೇ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Advertisement
ಗೂಗಲ್‌ನ ಅಂಗಸಂಸ್ಥೆಯಾದ ಆಲ್ಫಬೆಟ್‌ಗೆ 1, 337 ಕೋಟಿ ರೂ. ದಂಡವನ್ನು ಸಿಸಿಐ ವಿಧಿಸಿತ್ತು. ಗೂಗಲ್‌ನ ಪ್ರಾಬಲ್ಯ ದುರುಪಯೋಗದಿಂದ ಭಾರತದ ಆ್ಯಂಡ್ರಾಯ್ಡ ಮೊಬೈಲ್ ಬಳಕೆದಾರರಿಗೆ ತೊಂದರೆಯಾಗುತ್ತಿದೆ ಸಿಸಿಐ ಪ್ರತಿಪಾದಿಸಿತ್ತು. ಇದನ್ನು ಪ್ರಶ್ನಿಸಿ ಗೂಗಲ್ ಸುಪ್ರೀಂ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದೆ