Advertisement

ಗೂಗ್ಲೀ ಡೊಮೈನ್‌ ಹೆಸರೂ ಕೂಡ ಗೂಗಲ್‌ ಪಾಲಿಗೆ

03:45 AM Apr 06, 2017 | Team Udayavani |

ನವದೆಹಲಿ: ಸಾಫ್ಟವೇರ್‌ ದೈತ್ಯ ಗೂಗಲ್‌ ತೆಕ್ಕೆಗೆ ಈಗ “ಗೂಗ್ಲೀ’ ಹೆಸರಿನ ಅಂತರ್ಜಾಲ ಡೊಮೈನ್‌ (ವೆಬ್‌ಪೇಜ್‌ ಗುರುತು) ಕೂಡ ಸೇರಿದೆ.  ಗೂಗ್ಲೀ ಡೊಮೈನ್‌ ಅನ್ನು ಗೂಗಲ್‌.ಕಾಮ್‌ಗೆ ಕೊಡುವ ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ತೀರ್ಪಲ್ಲಿ ಮಧ್ಯಪ್ರವೇಶಿಸಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಜೊತೆಗೆ ಗೂಗ್ಲೀ ಡೊಮೈನ್‌ ಅನ್ನು ನೋಂದಾಯಿಸಿದ್ದರಲ್ಲಿ ಸದುದ್ದೇಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ. 

Advertisement

ಗುಲ್ಶನ್‌ ಖಂತ್ರಿ ಎಂಬುವವರು ಗೂಗ್ಲೀ ಹೆಸರಿನ ಡೊಮೈನ್‌ ಅನ್ನು ನೋಂದಾಯಿಸಿದ್ದು, ಪ್ರಮಾದವಶಾತ್‌ ಮಾಡಿದ್ದಾಗಿ ಹೇಳಿದ್ದರು. ಇದರಲ್ಲಿ ತಪ್ಪೇನಿದೆ? ಕ್ರಿಕೆಟ್‌ನಲ್ಲೂ ಬಳಕೆಯಲ್ಲಿದೆ ಎಂದಿದ್ದರು. ಈ ಬಗ್ಗೆ ನ್ಯಾಯಾಧಿಕರಣ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಗೂಗ್ಲೀ ಹೆಸರಿನ ಆರಂಭದಲ್ಲಿ ಗೂಗಲ್‌ ಎಂಬುದು ಬರುವುದರಿಂದ ಮತ್ತು ಗೂಗಲ್‌ ಸರಕು ಮತ್ತು ಸೇವೆಯ ಹೆಸರನ್ನೇ ಪ್ರತಿನಿಧಿಸುವುದರಿಂದ ಈ ಡೊಮೈನ್‌ ಸದುದ್ದೇಶದ್ದಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೇ ಗೂಗಲ್‌ ಅನ್ನೇ ವೆಬ್‌ಪೇಜ್‌ನಲ್ಲಿ ಅನುಕರಿಸಲಾಗಿದೆ ಎಂದು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next