Advertisement

Agra: ಟ್ರ್ಯಾಕ್ಟರ್‌ಗೆ ಢಿಕ್ಕಿ ಹೊಡೆದು ಹಳಿ ತಪ್ಪಿದ ಗೂಡ್ಸ್ ರೈಲು, 6 ಮಂದಿಗೆ ಗಾಯ

03:08 PM Jun 24, 2023 | Team Udayavani |

ಆಗ್ರಾ: ಗೂಡ್ಸ್ ರೈಲೊಂದು ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಹಳಿ ತಪ್ಪಿದ ಪರಿಣಾಮ ೬ ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಬನ್ಸಿ ಪಹಾರ್‌ಪುರ-ರುಬ್ಬಾಸ್ ರೈಲು ವಿಭಾಗದ ಲೆವೆಲ್ ಕ್ರಾಸಿಂಗ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಢಿಕ್ಕಿ ಹೊಡೆದ ಸಂದರ್ಭ ಗೂಡ್ಸ್ ರೈಲಿನ ನಾಲ್ಕು ಚಕ್ರಗಳು ಹಳಿತಪ್ಪಿದವು” ಎಂದು ಉತ್ತರ ಮಧ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಘರ್ಷಣೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಗೊಂಡ ಸ್ಥಳಕ್ಕೆ ರಕ್ಷಣಾ ಕಾರ್ಯ ತಂಡ ಧಾವಿಸಿದ್ದು, ಹಳಿ ತಪ್ಪಿದ ರೈಲನ್ನು ದುರಸ್ತಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜೂನ್ 21 ರಂದು ಆಂಧ್ರಪ್ರದೇಶದ ವಿಜಯನಗರಂ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿತಪ್ಪಿತ್ತು. ರೈಲ್ವೆ ಅಧಿಕಾರಿಗಳ ಪ್ರಕಾರ, ಲೂಪ್ ಟ್ರ್ಯಾಕ್‌ನಿಂದ ಮುಖ್ಯ ಟ್ರ್ಯಾಕ್‌ಗೆ ಚಲಿಸುವಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಇದನ್ನೂ ಓದಿ: ಬೆಂಗಳೂರು- ಮೈಸೂರು ಹೆದ್ದಾರಿ: ಡೆತ್‌ ವೇನಲ್ಲಿ ಬ್ಲಾಕ್‌ಸ್ಪಾಟ್‌ ಗುರುತಿಸಿ

Advertisement

Udayavani is now on Telegram. Click here to join our channel and stay updated with the latest news.

Next