ನವದೆಹಲಿ: ಅವಿಭಜಿತ ಆಂಧ್ರ ಪ್ರದೇಶದ ಕೊನೆಯ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ,ʻದಯವಿಟ್ಟು ನನ್ನ ಈ ಪತ್ರವನ್ನು ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆಯಾಗಿ ಸ್ವೀಕರಿಸಿʼ ಎಂದು ಬರೆದಿದ್ದಾರೆ.
ಅವಿಭಜಿತ ಆಂಧ್ರಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣವನ್ನು ರೂಪಿಸಲು ಯುಪಿಎ ಸರ್ಕಾರ ನಿರ್ಧರಿಸಿದ ಬಳಿಕ ಅವರು 2014 ರಲ್ಲಿ ಕಾಂಗ್ರೆಸ್‌ಗೆ ರಾಜಿನಾಮೆ ನೀಡಿದ್ದರು. ಕಾಂಗ್ರೆಸ್‌ನಿಂದ ಹೊರಬಂದ ಬಳಿಕ ಅವರು ತಮ್ಮದೇ ʻಜೈ ಸಮೈಕ್ಯಂಧ್ರ ಪಕ್ಷʼವನ್ನು ಕಟ್ಟಿದ್ದರು. ಅದರಿಂದಲೇ 2014 ರ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ಆ ಬಳಿಕ ಚುನಾವಣಾ ಆದಾಯವಿಲ್ಲದ್ದರಿಂದ ಮತ್ತೆ 2018ರಲ್ಲಿ ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಕಾಂಗ್ರೆಸ್‌ಗೆ ರಾಜಿನಾಮೆ ನೀಡಿದ್ಧಾರೆ.
ಇದನ್ನೂ ಓದಿ: ಮುಸ್ಲಿಮರ ಮತಗಳು ಬೇಡ ಎಂದಿಲ್ಲ, ಆದರೆ…: ಮಂಗಳೂರಿನಲ್ಲಿ ಈಶ್ವರಪ್ಪ