Advertisement

ಪಂಜಾಬ್‌ನ ಹಿರಿಯ ನಾಯಕ ಸುನೀಲ್‌ ಜಾಖಡ್‌ ಕಾಂಗ್ರೆಸ್‌ಗೆ ವಿದಾಯ

07:56 PM May 14, 2022 | Team Udayavani |

ನವದೆಹಲಿ: ಕಾಂಗ್ರೆಸ್‌ನಿಂದ ಈಗಾಗಲೇ ಎರಡು ವರ್ಷ ಅಮಾನತುಗೊಂಡಿರುವ ಪಂಜಾಬ್‌ನ ಹಿರಿಯ ನಾಯಕ ಸುನೀಲ್‌ ಜಾಖಡ್‌; ಕಾಂಗ್ರೆಸ್‌ಗೆ ವಿದಾಯ ಹೇಳಿದ್ದಾರೆ.

Advertisement

ಫೇಸ್‌ಬುಕ್‌ನಲ್ಲಿ ಈ ಕುರಿತಂತೆ ತಮ್ಮ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಗುಡ್‌ಲಕ್‌ ಆ್ಯಂಡ್‌ ಗುಡ್‌ಬೈ ಕಾಂಗ್ರೆಸ್‌ ಎಂದು ಹೇಳಿದ್ದಾರೆ.

“ಈ ಹಿಂದೆ ಪಂಜಾಬ್‌ ಸಿಎಂ ಆಗಿದ್ದ ಅಮರೀಂದರ್‌ ಸಿಂಗ್‌ ಜಾಗದಲ್ಲಿ ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್‌ ಸಿಂಗ್‌ ಛನ್ನಿಯನ್ನು ನೇಮಿಸಿದ್ದಾಗಲೇ ಅವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಿಂದಲೇ ಪಕ್ಷದಲ್ಲಿ ಇರುಸು ಮುರುಸು ಶುರುವಾಗಿತ್ತು. ತಾನೀಗ ನೋವಲ್ಲಿದ್ದೇನೆ, ಆದರೂ ಕಾಂಗ್ರೆಸ್‌ ಬಗ್ಗೆ ಅಯ್ಯೋ ಅನಿಸುತ್ತಿದೆ. ಉದಯಪುರದಲ್ಲಿ ಕಾಂಗ್ರೆಸ್‌ ಚಿಂತನ ಶಿಬಿರ ಹಮ್ಮಿಕೊಂಡಿದೆ.ಅದರ ಬದಲು “ಚಿಂತೆಯ ಶಿಬಿರ’ ಮಾಡುವುದೊಳ್ಳೆಯದಿತ್ತು’ ಎಂದು ಕುಟುಕಿದ್ದಾರೆ.

ಕಾಂಗ್ರೆಸ್‌ ಅಗ್ರನಾಯಕಿ ಸೋನಿಯಾ ಗಾಂಧಿ ವಿರುದ್ಧವೂ ಹರಿಹಾಯ್ದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next