ಶಿರ್ವ: ವಿದ್ಯಾರ್ಥಿ ಜೀವನ ಎನ್ನುವುದು ಭವಿಷ್ಯದ ಜೀವನದ ದಿಕ್ಸೂಚಿಯಾಗಿದ್ದು, ಅವಕಾಶಗಳ ಸದ್ಬಳಕೆ, ಆತ್ಮವಿಶ್ವಾಸ, ಮತ್ತು ಸಾಧನಾ ಪ್ರವೃತ್ತಿ ಬೆಳೆಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ. ವಿಜ್ಞಾನ ವಿಭಾಗದಲ್ಲಿ ಹಲವಾರು ಅವಕಾಶಗಳಿದ್ದು ನಮ್ಮ ಆಸಕ್ತಿಯ ವಿಭಾಗವನ್ನು ಆಯ್ದುಕೊಂಡಾಗ ಯೋಜಿತ ಗುರಿ ಮಟ್ಟಲು ಸಾಧ್ಯ ಎಂದು ಶಿರ್ವ ಹಿಂದೂ ಪ. ಪೂ.ಕಾಲೇಜಿನ ಹಳೆ ವಿದ್ಯಾರ್ಥಿನಿ ನೇಹಾ ಅರಸ್ ಹೇಳಿದರು.
ಅವರು ಸೋಮವಾರ ಶಿರ್ವ ಹಿಂದೂ ಪ.ಪೂ. ಕಾಲೇಜಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ ಎರಡು ದಿನಗಳ ಸೇತು ಬಂಧ- ಕೌಶಲಾಭಿವೃದ್ಧಿ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಕುತ್ಯಾರು ಕಿಶೋರ್ ಕುಮಾರ್ ಮಾತನಾಡಿ ವಿದ್ಯಾಸಂಸ್ಥೆಯಲ್ಲಿ ಕಲಿಕೆಗೆ ಪೂರಕವಾದ ಉತ್ತಮ ವಾತಾವರಣವಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇವೆ ನೀಡಲು ಹಳೆವಿದ್ಯಾರ್ಥಿ ಸಂಘ ಸಿದ್ದವಿದ್ದು ಉತ್ತಮ ಫಲಿತಾಂಶ ನೀಡಿದ ಸಂಸ್ಥೆಯ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದವನ್ನು ಅಭಿನಂದಿಸಿದರು.
ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.100, ವಿಜ್ಞಾನ ವಿಭಾಗದಲ್ಲಿ ಶೇ. 94.7 ಫಲಿತಾಂಶಕ್ಕೆ ವಿದ್ಯಾರ್ಥಿಗಳ ಸಾಧನೆಯ ಜೊತೆಗೆ ಪ್ರೇರಣಾಶಕ್ತಿಯಾಗಿ ಶ್ರಮಿಸಿದ ಉಪನ್ಯಾಸಕ ವಿಭಾಗದ ಆಶಾಲತಾ, ಲವಿನಾ ಮಿನೇಜಸ್, ವಸುದೀಪ್, ಲಕೀÒ$¾ದೇವಿ, ವಿಷ್ಣು ಭಟ್, ಸುಂದರ ಮೇರ ಅವರನ್ನು ಅಭಿನಂದಿಸಲಾಯಿತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ|ವೈ.ಭಾಸ್ಕರ ಶೆಟ್ಟಿ ಮಾತನಾಡಿ ಜೀವನದಲ್ಲಿ ದಾರಿ ತೋರಿದವರು, ಸಹಾಯ ನೀಡಿದವರನ್ನು ಸ್ಮರಿಸುವುದು ಉತ್ತಮ ಗುಣವಾಗಿದ್ದು,ನಾವು ಅಳವಡಿಸಿ ಕೊಂಡ ಉನ್ನತ ನೈತಿಕ ಮೌಲ್ಯಗಳು, ಆದರ್ಶಗಳು ನಮ್ಮ ಜೀವನವನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತವೆ. ಶಿಕ್ಷಣ ಸಂಸ್ಥೆಗೆ ಉತ್ತಮ ಫಲಿತಾಂಶ ಮಾತ್ರ ಮುಖ್ಯವಲ್ಲ, ಶಿಕ್ಷಣದ ಗುಣಮಟ್ಟವೂ ಪ್ರಾಮುಖ್ಯವಾಗಿದೆ ಎನ್ನುವುದಕ್ಕೆ 2019-20ನೇ ಶೈಕ್ಷಣಿಕ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣವೂ ಹೆಚ್ಚಾಗುತ್ತಿರುವುದೇ ಸಾಕ್ಷಿ ಎಂದರು.
ಸಂಪನ್ಮೂಲ ವ್ಯಕ್ತಿ ಜೈಕಿಶನ್ ಭಟ್ ಮಂಗಳೂರು, ಉಪನ್ಯಾಸಕ ವಿಷ್ಣು ಭಟ್, ವಸುದೀಪ್ ಮಾತನಾಡಿದರು.
ವೇದಿಕೆಯಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಸೊರ್ಕಳ ಸಚ್ಚಿದಾನಂದ ಹೆಗ್ಡೆ, ಉಪನ್ಯಾಸಕರಾದ ಲವಿನಾ ಮಿನೇಜಸ್,ಸುರೇಂದ್ರ ಶೆಟ್ಟಿ, ವಿನಯ ಕುಮಾರ್, ಸುಪ್ರೀತಾ, ಆಶಾಲತಾ, ಉಪಸ್ಥಿತರಿದ್ದರು.
ಪ್ರಭಾರ ಪ್ರಾಂಶುಪಾಲ ಭಾಸ್ಕರ್ ಸ್ವಾಗತಿಸಿದರು. ಲಕೀÒ$¾ದೇವಿ,ಸುಪ್ರೀತಾ ನಿರೂಪಿಸಿ, ಫೌÅಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶಕಿಲಾ ವಂದಿಸಿದರು.