Advertisement

ಅಂದದ ಕಾಲಿಗೆ ಚಂದದ ಚಪ್ಪಲಿ

09:56 AM May 10, 2019 | Sriram |

ಕಾಲಿನ ಅಂದವನ್ನು ಹೆಚ್ಚಿಸುವ ವಿಚಾರದಲ್ಲಿ ಪಾದರಕ್ಷೆಗಳ ಪಾತ್ರ ಅತೀ ಮುಖ್ಯ.ಕಾಲಕ್ಕೆ ತಕ್ಕಂತೆ ಮನಮೋಹಕ ಶೂ, ಚಪ್ಪಲ್‌ಗ‌ಳು ಮಾರುಕಟ್ಟೆಯಲ್ಲಿ ತಮ್ಮ ಕಾರುಬಾರು ಆರಂಭಿಸಿ ಬಿಟ್ಟಿರುತ್ತವೆ. ಈ ಬಾರಿ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಪಡೆದಿರುವ ಚಪ್ಪಲ್‌ಗ‌ಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

Advertisement

ಪ್ಲಾಸ್ಟಿಕ್‌ ಸ್ಲೆ„ಡ್‌
ಹೆಸರೇ ಸೂಚಿಸುವಂತೆ ಇದು ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಪಾದುಕೆಗಳು.
ಬಾತ್‌ರೂಂ,ಬೆಡ್‌ ರೂಂ ಮತ್ತು ಮನೆಯೊಳಗಿನ ಬಳಕೆಗೆ ಹೇಳಿ ಮಾಡಿಸಿದಂತೆ ಇದನ್ನು ತಯಾರು ಮಾಡಲಾಗಿದೆ.ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯವಿರುವ ಈ ಚಪ್ಪಲಿಗಳು ಹಗುರ ಭಾರ ದಿಂದ ಕೂಡಿದ್ದು, ಮೃದುವಾಗಿ ಇವೆ. ಕೋಮಲ ಕಾಲಿನ ಸಂರಕ್ಷಣೆಯ ವಿಚಾರಕ್ಕೆ ಬಂದಾಗಲು ಈ ಚಪ್ಪಲಿಗಳು ಹೆಚ್ಚು ಸೂಕ್ತವಾಗಿದ್ದು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಫ್ಲ್ಯಾಟ್‌ಫಾರ್ಮ್ ಸ್ನಿಕರ್
ಸುಮಾರು ನಾಲ್ಕು ಇಂಚು ಎತ್ತರ ಈ ಚಪ್ಪಲ್‌ಗ‌ಳ ತಳಭಾಗದ ರಚನೆ ಇದ್ದು,ವಿವಿಧ ವಿನ್ಯಾಸಗಳಲ್ಲಿ ಇವುಗಳನ್ನು ತಯಾರು ಮಾಡಲಾಗಿದೆ. ಹಿಂದಿನ ಕಾಲದಲ್ಲಿ ಗ್ರೀಸ್‌, ರೋಮ್‌, ಈಜಿಪ್ಟ್, ಜಪಾನ್‌ ದೇಶಗಳಲ್ಲಿಯೂ ಈ ಸುಂದರ ಚಪ್ಪಲ್‌ಗ‌ಳ ಬಳಕೆ ಇತ್ತು ಎನ್ನುವುದಕ್ಕೆ ಇತಿಹಾಸದಲ್ಲಿಯೂ ಪುರಾವೆಗಳು ದೊರೆಯುತ್ತವೆ. ಕುಳ್ಳಗಿರುವ ವ್ಯಕ್ತಿಗಳ ಎತ್ತರದ ಜತೆಗೆ ಸೌಂದರ್ಯವನ್ನು ಹೆಚ್ಚಿಸಬಲ್ಲ ಈ ಶೂಗಳು ಎಲ್ಲರಿಗೂ ಆಲ್‌ ಟೈಮ್‌ ಫೇವರೆಟ್‌ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ತೆವಾ ಚಪ್ಪಲ್ಸ್‌
ಚಪ್ಪಲ್‌ ಬ್ರ್ಯಾಂಡೆಡ್‌ ಆಗಿರಲಿ ಅಥವಾ ಲೋಕಲ್‌ ಆಗಿರಲಿ ಅದು ಇನ್ನೊಬ್ಬರ ಮನಸೂರೆಗೊಳ್ಳುವುದು ಯಾವಾಗ ಎಂದರೆ ಅದರ ಬಣ್ಣ, ವಿನ್ಯಾಸ, ಮತ್ತು ಅದು ಎಷ್ಟರ ಮಟ್ಟಿಗೆ ಫ‌ಪೆìಕ್ಟ್ ಆಗಿದೆ ಎನ್ನುವುದರ ಮೇಲೆ. ಇಲ್ಲೊಂದು ಸುಂದರ ಬೆಲ್ಟ್ ಚಪ್ಪಲ್‌ ನಿಮಗೆಂದೇ ತಯಾರಾಗಿದೆ. ಈ ಚಪ್ಪಲ್‌ ಅನ್ನು ನಾವು ಫ್ಲೋಟರ್‌ ಎಂದೂ ಕರೆಯಬಹುದು.

ಈ ಚಪ್ಪಲ್‌ಗ‌ಳು ವಾಟರ್‌ ಪ್ರೂಫ್ ಆಗಿದ್ದು ಎಲ್ಲ ಕಾಲಕ್ಕೂ ಉಪಯೋಗಕ್ಕೆ ಯೋಗ್ಯವಾದಂತಹವುಗಳಾಗಿವೆ. ರಣ ಬಿಸಿಲಿರಲಿ, ಅಬ್ಬರದ ಮಳೆ ಇರಲಿ ಎಲ್ಲ ಸೀಸನ್‌ನಲ್ಲಿಯೂ ಈ ಚಪ್ಪಲಿಗಳು ನಿಮ್ಮ ಕಾಲಿನ ಸೌಂದರ್ಯದ ಜತೆಗೆ ಸಂರಕ್ಷಣೆ ಮಾಡುತ್ತದೆ.

Advertisement

ರೋಪ್‌ ಸ್ಯಾಂಡಲ್ಸ್‌
ಚಿತ್ರ ವಿಚಿತ್ರ ಚಪ್ಪಲಿಗಳ ಮೇಲೆ ವಿಪರೀತ ವ್ಯಾಮೋಹ ಹೊಂದಿರುವ ವ್ಯಕ್ತಿಗಳಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಹೊಸ ಫ್ಯಾಶನ್‌ ಮಾರುಕಟ್ಟೆಗೆ ಬರುವುದಕ್ಕಾಗಿಯೇ ಕಾಯುವವರೂ ಇದ್ದಾರೆ. ಹೀಗೆ ಕಾಯುತ್ತಿರುವ ಚಪ್ಪಲ್‌ ಪ್ರಿಯರಿಗೆ ಹಗ್ಗಗಳನ್ನು ಬಳಸಿ ತಯಾರಿಸಲಾಗಿರುವ ಪಾದುಕೆಗಳು ಸಿದ್ಧವಾಗಿವೆ. ಬಣ್ಣ ಬಣ್ಣದ ಹಗ್ಗಗಳನ್ನು ಬಳಸಿ ಇವುಗಳನ್ನು ತಯರಿಸಲಾಗಿದ್ದು,ನೋಡುಗರ ಮನಸೂರೆಗೊಳ್ಳುತ್ತವೆ ಎನ್ನುವು ದರಲ್ಲಿ ಎರಡು ಮಾತಿಲ್ಲ. ಲೋಕಲ್‌ ಬ್ರ್ಯಾಂಡ್‌ಗಳಿಂದ ಹಿಡಿದು ಸ್ಟಾಂಡರ್ಡ್‌ ಕಂಪೆನಿಗಳು ಈ ರೀತಿಯ ಚಪ್ಪಲ್‌ಗ‌ಳನ್ನು ತಯಾರಿ ಸುತ್ತಿದ್ದು, ಮಾರುಕಟ್ಟೆ ಯಲ್ಲಿ ತನ್ನ ಹವಾ ಸೃಷ್ಟಿಸುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

-ಭುವನ ಬಾಬು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next