Advertisement
ನನಗೆ ಮೀಟಿಂಗ್‌ಗೆ, ಮತ್ತೂಬ್ಬರಿಗೆ ಮೆಸ್ಕಾಂ ಬಿಲ್ ಕಟ್ಟಲು ಇದೆ ಅರ್ಜೆಂಟ್ ಹೋಗಬೇಕು ತೆಗೆಯಿರಿ ಎಂದು ಬೊಬ್ಬೆ ಹಾಕಿ, ಬೈಕ್‌ನ್ನು ಹಾಕಿದ ಗೇಟ್‌ನ ಕೆಳಗೆ ತೂರಿಸಲು ಪ್ರಯತ್ನಿಸಿ ದಾಗ ಸ್ಥಳದಲ್ಲಿದ್ದ ಅಧಿಕಾರಿಗಳು ಬಲವಂತವಾಗಿ ಗೇಟ್ ತೆಗೆಯುವುದರಿಂದ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಪ್ರ್ಯಾತ್ಯಕ್ಷಿಕೆ ಇಲ್ಲಿನ ಹಳೆಯಂಗಡಿ ಇಂದಿರಾನಗರದ ರೈಲ್ವೇಗೇಟ್‌ನಲ್ಲಿ ಗುರುವಾರ ಜರಗಿತು.
Related Articles
ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಬಲ ಸಾಲ್ಯಾನ್ ಮಾತ ನಾಡಿ, ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ನಲ್ಲಿ ಮುಕ್ತವಾಗಿ ಸಂಚರಿಸಲು ಮೇಲ್ಸೇತುವೆ ಅಗತ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದರೆ ರಾಜ್ಯ ಸರಕಾರ ಜಮೀನು ನೀಡಿಲ್ಲ ಎಂಬ ಮಾತು ಅಧಿಕಾರಿಗಳಿಂದ ಕೇಳಿ ಬಂದಿದೆ. ರೈಲ್ವೇ ಕ್ರಾಸಿಂಗ್ ಬಗ್ಗೆ ಉತ್ತಮ ಜಾಗೃತಿ ಮೂಡಿಸಿರುವುದು ಕೊಂಕಣ ರೈಲ್ವೇಯ ಕಾರ್ಯಕ್ಷಮತೆ ಮೆಚ್ಚುವಂಥದ್ದಾಗಿದೆ ಎಂದರು.
Advertisement
ಮಂಗಳೂರು ಪ್ರಾದೇ ಶಿಕ ಸಂಚಾರದ ಪ್ರಬಂಧಕ ಎಸ್. ವಿನಯ ಕುಮಾರ್ ನೇತೃತ್ವದಲ್ಲಿ ಸಹಾಯಕ ಪ್ರಬಂಧಕ ದರ್ಶನ್ ಠಾಕೂರ್, ಸುರತ್ಕಲ್ ನಿಲ್ದಾಣದ ಸೂಪರ್ ವೈಸರ್ ಶೇಷಗಿರಿ, ಸಿಬಂದಿಯೊಂದಿಗೆ ರೈಲ್ವೇ ಕ್ರಾಸಿಂಗ್‌ನಲ್ಲಿ ಜನರು ಉದ್ವೇಗದಿಂದ ಪ್ರತಿಕ್ರಿಯಿಸುವ ಬಗೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.
ಕಲ್ಲಾಪು ಕ್ರಾಸಿಂಗ್‌ನಲ್ಲೂ ಸಮಸ್ಯೆರೈಲ್ವೇ ಇಲಾಖೆಯು ಹಳೆಯಂಗಡಿ ಮತ್ತು ಕಲ್ಲಾಪುವಿನ ನಡುವೆ ಮೇಲ್ಸೇತುವೆ ನಿರ್ಮಿಸಬೇಕು ಇದರಿಂದ ಎರಡೂ ಕಡೆಗಳಲ್ಲೂ ಅನುಕೂಲವಾಗುತ್ತದೆ.ರೈಲ್ವೇ ಜಾಗೃತಿ ಸಮಯದಲ್ಲಿಯೇ ಈ ಬಗ್ಗೆ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ . ಕಲ್ಲಾಪುವಿನಲ್ಲಿ ಇಕ್ಕಟ್ಟಿನಲ್ಲಿ ರಸ್ತೆ ಸಂಚಾರ ಇದೆ ಎಂದು ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್ ಅವರು ಹೇಳಿದರು.