Advertisement

ಮೊದಲ ದಿನ ಉತ್ತಮ ಸ್ಪಂದನೆ

02:58 PM Apr 29, 2021 | Team Udayavani |

ಹಾಸನ: ಜನತಾ ಲಾಕ್‌ಡೌನ್‌ ಜಾರಿಯ ಮೊದಲ ದಿನ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ವಸ್ತು ಖರೀದಿ ಅವಧಿ ಬೆಳಿಗ್ಗೆ 6 ರಿಂದ 10 ಗಂಟೆಗೆ ಮುಗಿಯುತ್ತಿದ್ದಂತೆ ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಗಸ್ತು ತಿರುಗಿ ಅಂಗಡಿಗಳನ್ನು ಮುಚ್ಚಿಸಿದರು.

Advertisement

ಬಹುತೇಕ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದರು. 10.30ರ ವೇಳೆಗೆ ಹಾಸನ ನಗರದಲ್ಲಿ ಜನ ಜೀವನ ಬಹುತೇಕ ಸ್ತಬ್ಧವಾಯಿತು. ಮೆಡಿಕಲ್‌ ಶಾಪ್‌, ಆಸ್ಪತ್ರೆ, ಹಾಲಿನ ಕೇಂದ್ರ ಬಿಟ್ಟು ಉಳಿದೆಲ್ಲ ಅಂಗಡಿಗಳೂ ಬಂದ್‌ ಆಗಿದ್ದವು. ರಸ್ತೆಗಳಲ್ಲಿ ಅನಗತ್ಯವಾಗಿ ತಿರುಗುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.

ಬಡಾವಣೆಗಳ ಹೊರತುಪಡಿಸಿ ಪ್ರಮುಖ ರಸ್ತೆಗಳು ಬೀದಿಗಳು ಕೇಂದ್ರೀಯ ಬಸ್‌ ನಿಲ್ದಾಣ, ನಗರ ಬಸ್‌ ನಿಲ್ದಾಣ ವಾಹನಗಳು, ಜನರ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next