Advertisement

ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲಿ ಬೆಂಬಲ: ಬಸ್ ನಿಲ್ದಾಣಕ್ಕೆ ಮುತ್ತಿಗೆ

12:24 PM Sep 28, 2020 | keerthan |

ಬೆಳಗಾವಿ: ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಬಲವಾಗಿ ಬೆಳಗಾವಿಯಲ್ಲಿ ಬೆಳಿಗ್ಗೆಯಿಂದ ರೈತ ಪರ ಹಾಗೂ ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.

Advertisement

ಕನ್ನಡಪರ ಹೋರಾಟಗಾರರು ಬೆಳಗಿನ ಜಾವವೇ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣಕ್ಕೆ ಮುತ್ತಿಗೆ ಹಾಕಿ ಬಸ್ ಗಳ ಓಡಾಟಕ್ಕೆ ಅಡ್ಡಿಪಡಿಸಿದರು.

ಇದನ್ನೂ ಓದಿ:ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ ನೇತೃತ್ವದಲ್ಲಿ ಬಸ್ ನಿಲ್ಧಾಣಕ್ಕೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಬಸ್ ಗಳ ಓಡಾಟ ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.

ಇದನ್ನೂ ಓದಿ:ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ

Advertisement

ಬಸ್ ಸಂಚಾರ ಇದೆ ಎಂದು ನಂಬಿಕೊಂಡು ಬಸ್ ಸ್ಟ್ಯಾಂಡ್ ಗೆ ಬಂದಿದ್ದ ನೂರಾರು ಪ್ರಯಾಣಿಕರು ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next