Advertisement

ಉತ್ತಮ ಮಳೆ: ಶೇಂಗಾ ಬಿತ್ತನೆ ಕಾರ್ಯ ಬಹುತೇಕ ಪೂರ್ಣ

02:24 PM Aug 10, 2020 | Suhan S |

ಮೊಳಕಾಲ್ಮೂರು: ತಾಲೂಕಿನಲ್ಲಿ ಸುರಿದ ಉತ್ತಮವಾದ ಹದ ಮಳೆಯಿಂದ ಶೇ. 95 ರಷ್ಟು ಶೇಂಗಾ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

Advertisement

ಬಹುತೇಕ ರೈತರು ಜಮೀನುಗಳನ್ನು ಬಿತ್ತನೆಗೆ ಸಿದ್ಧಪಡಿಸಿಕೊಂಡಿದ್ದರು. ಶೇಂಗಾ ಬಿತ್ತನೆಗೆ ಸರ್ಕಾರದಿಂದ ಸುಮಾರು 4 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ಸರಬರಾಜಾಗಿತ್ತು. ತಾಲೂಕಿನಲ್ಲಿ ಸುಮಾರು 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿದ್ದು, ಸುಮಾರು 31 ಸಾವಿರ ಹೆಕ್ಟೇರ್‌ ಪ್ರದೇಶಕ್ಕಿಂತಲೂ ಹೆಚ್ಚು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಖುಷ್ಕಿ ಜಮೀನುಗಳಲ್ಲಿ ಪ್ರಮುಖ ಶೇಂಗಾ ಬೆಳೆ ಸೇರಿದಂತೆ ಸಜ್ಜೆ, ಜೋಳ, ನವಣೆ, ಹುರುಳಿ, ತೊಗರಿ, ಅಲಸಂದಿ, ಹೆಸರುಕಾಳು ಸೇರಿದಂತೆ ಇನ್ನಿತರ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಲಾಗಿದೆ. ನೀರಾವರಿ ಜಮೀನುಗಳಲ್ಲಿ ಭತ್ತ, ರಾಗಿ, ಹೈಬ್ರಿಡ್‌ ಜೋಳ, ಮುಸುಕಿನ ಜೋಳ, ಹತ್ತಿ, ಈರುಳ್ಳಿ ಹಾಗೂ ಇನ್ನಿತರ ಬೆಳೆಗಳ ನಾಟಿ ಹಾಗೂ ಬಿತ್ತನೆ ಮಾಡಲಾಗಿದೆ.

ತಾಲೂಕಿನಲ್ಲಿ ಸಕಾಲಕ್ಕೆ ಉತ್ತಮವಾದ ಮಳೆಯಾಗಿರುವ ಕಾರಣ ರೈತರು ಸುಮಾರು 31 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯವನ್ನು ಪೂರೈಸಿದ್ದಾರೆ. ಶೇಂಗಾ ಹಾಗೂ ಇನ್ನಿತರ ಬೆಳೆಗಳಿಗೆ ಹೆಚ್ಚಿನ ಮಳೆಯಿಂದ ಯಾವುದೇ ರೋಗ ಬಾರದಂತೆ ಕೃಷಿ ಇಲಾಖೆಯ ನಿರ್ದೇಶನದಲ್ಲಿ ಔಷಧಿ ಸಿಂಪಡಿಸಿ ಬೆಳೆಯನ್ನು ರಕ್ಷಿಸಿಕೊಳ್ಳಬೇಕು.- ಅಶೋಕ, ಸಹಾಯಕ ಕೃಷಿ ನಿರ್ದೇಶಕ

10-12 ವರ್ಷಗಳ ನಂತರ ಮೊಳಕಾಲ್ಮೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಇದು ರೈತರು ಸಕಾಲಕ್ಕೆ ಬಿತ್ತೆನೆ ಮಾಡಿಕೊಳ್ಳಲು ಸಹಕಾರಿಯಾಗಿದೆ.  ಬೆಳಗಲ್‌ ಈಶ್ವರಯ್ಯಸ್ವಾಮಿ, ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next