ಬೆಂಗಳೂರು/ಮುಂಬಯಿ: ಇನ್ಫೋಸಿಸ್‌ನ ಭಿನ್ನಮತ ವಿಚಾರ ಸೋಮವಾರ ಹಲವು ರೂಪಗಳನ್ನು ಪಡೆಯಿತು. ಮುಂಬೈನಲ್ಲಿ ನಡೆದ ಹೂಡಿಕೆದಾರರ ಸಭೆಯಲ್ಲಿ ಸಿಇಒ ವಿಶಾಲ್ ಸಿಕ್ಕಾ ನಗುತ್ತಲೇ ಪಾಲ್ಗೊಂಡರು. ಇತ್ತ ಸಂಸ್ಥಾಪಕ ನಾರಾಯಣ ಮೂರ್ತಿ ಆಡಳಿತ ಮಂಡಳಿ ಮೇಲೆ ಭರವಸೆಯ ನೋಟ ಬೀರಿದರು. ಅತ್ತ ಆಡಳಿತ ಮಂಡಳಿ ಅಧ್ಯಕ್ಷ ಆರ್. ಶೇಷಸಾಯಿ, ಮಂಡಳಿ ಮೇಲಿದ್ದ ಎಲ್ಲ ಆರೋಪಗಳಿಗೆ ತೆರೆ ಎಳೆಯಲೆತ್ನಿಸಿದರು.
ಆಂಗ್ಲ ವಾಹಿನಿ ಜತೆ ಮಾತನಾಡಿದ ನಾರಾಯಣ ಮೂರ್ತಿ, “ಇನ್ಫೋಸಿಸ್ ಮೇಲಿನ ನನ್ನ ಕಾಳಜಿ ಕಡಿಮೆಯಾಗಿಲ್ಲ. ಆಡಳಿತ ಮಂಡಳಿ ತನ್ನ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಮಂಡಳಿ ಪುನಾರಚನೆಗೊಳ್ಳುವ ಅವಶ್ಯಕತೆಯಿದೆ. ಒಳ್ಳೆಯ ಉದ್ದೇಶ ಹೊಂದಿದ ಎಲ್ಲ ವ್ಯಕ್ತಿಗಳೂ ಅತ್ಯಂತ ಪ್ರಾಮಾಣಿಕರೇ. ಆದರೆ, ಒಳ್ಳೆಯ ವ್ಯಕ್ತಿಗಳೂ ಕೆಲವೊಮ್ಮೆ ತಪ್ಪು ಮಾಡುತ್ತಾರೆ’ ಎಂದು ಹೇಳಿದ್ದಾರೆ.
“ಉತ್ತಮ ನಾಯಕತ್ವ ಯಾವತ್ತೂ ಎಲ್ಲ ಷೇರುದಾರರ ಕಾಳಜಿಯನ್ನು ಕಾಪಾಡಬೇಕು. ಅವರ ಅಭಿಮತವನ್ನು ಸಂಗ್ರಹಿಸಿ, ಯೋಗ್ಯ ಹೆಜ್ಜೆ ಇಡಬೇಕು. ಮಂಡಳಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ಇಟ್ಟುಕೊಂಡಿರುವೆ. ಅದು ತನ್ನ ಆಡಳಿತವನ್ನು ಸುಧಾರಿಸಿಕೊಂಡು ಕಂಪನಿಯ ಒಳ್ಳೆಯ ಭವಿಷ್ಯಕ್ಕೆ ಮುಂದಡಿ ಇಡುತ್ತದೆ ಎಂದು ನಂಬಿದ್ದೇನೆ’ ಎಂದು ಹೇಳಿದ್ದಾರೆ.
– ಮೂರ್ತಿ ಜತೆ ಚೆನ್ನಾಗಿದ್ದೇನೆ: ಮುಂಬಯಿನಲ್ಲಿ ಹೂಡಿಕೆದಾರರ ಸಭೆಯಲ್ಲಿ ಸಿಕ್ಕಾ ನಗುತ್ತಲೇ ಪಾಲ್ಗೊಂಡು, ಮೂರ್ತಿ ಜತೆಗಿನ ಸಂಬಂಧ ತಾಜಾವಾಗಿಯೇ ಇದು ಎಂದು ಸ್ಪಷ್ಟೀಕರಿಸಿದರು. “ಸಂಸ್ಥಾಪಕರ ಜತೆ ನನ್ನ ಸಂಬಂಧ ಚೆನ್ನಾಗಿಯೇ ಇದೆ. ಮೂರ್ತಿ ಅವರನ್ನು ನಾನು ವರ್ಷಕ್ಕೆ ಐದಾರು ಬಾರಿ ಭೇಟಿ ಆಗುತ್ತೇನೆ. ಅವರೊಂದಿಗೆ ಹೃದಯಪೂರ್ವಕ ವಾಗಿಯೇ ಹಲವು ಅನಿಸಿಕೆ ಹಂಚಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ. “ಸಂಸ್ಥೆಯ ಇತ್ತೀಚಿನ ಬೆಳವಣಿಗೆಗಳ ಮೇಲಿನ ಮಾಧ್ಯಮಗಳ ವಿಶ್ಲೇಷಣೆ ನನ್ನನ್ನು ತಬ್ಬಿಬ್ಬುಗೊಳಿಸಿವೆ. ಆದರೆ, ನಮ್ಮ ಸಂಸ್ಥೆ ಅತ್ಯಂತ ಭದ್ರಬುನಾದಿಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಹೂಡಿಕೆದಾರರಿಗೆ ಹೇಳಿದರು.
ಯಾವುದೇ ಭಿನ್ನಮತ ಇಲ್ಲ: ಶೇಷಸಾಯಿ
ಇನೊ³àಸಿಸ್ ಸಿಇಒ ವೇತನ ಹೆಚ್ಚಳ ಮತ್ತು ನಿರ್ಗಮಿತ ಉನ್ನತಾಧಿಕಾರಿಗಳ ಬೇರ್ಪಡಿಕೆ ಪರಿಹಾರ ಕುರಿತ ಪತ್ರ ವಿವಾದಕ್ಕೆ ಆಡಳಿತ ಮಂಡಳಿಯ ನಿರ್ಧಾರವೇ ಕಾರಣ ಎಂಬ ಆರೋಪವಿತ್ತು. ಮುಂಬೈನಲ್ಲಿನ ಪತ್ರಿಕಾ ಗೋಷ್ಠಿಯಲ್ಲಿ ಈ ಆರೋಪಗಳಿಗೆಲ್ಲ ಮಂಡಳಿ ಅಧ್ಯಕ್ಷ ಆರ್. ಶೇಷಸಾಯಿ ತೆರೆ ಎಳೆಯಲೆತ್ನಿಸಿ ದರು. ಅವರು ಹೇಳಿದ್ದಿಷ್ಟು.
1. ಮಂಡಳಿಯಲ್ಲಿ ಪುನೀತಾ ಸಿನ್ಹಾ ಅವರನ್ನು ಸ್ವತಂತ್ರ ನಿರ್ದೇಶಕಿ ಆಗಿರುವುದು ಒಂದು ಗೌರವ. ಒಬ್ಬ ಮಹಿಳೆಯನ್ನು ಗಂಡನ ವೃತ್ತಿಯಿಂದ ನಿರ್ಧರಿಸುವುದು ತಪ್ಪು.
2. ಮಂಡಳಿ ವಿರುದ್ಧ ಯಾರೂ ಅಸಮಾ ಧಾನಗೊಂಡಿಲ್ಲ. ನಾನು ನಾರಾಯಣ ಮೂರ್ತಿ ಅವರ ಸಲಹೆ, ಟೀಕೆಗಳನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ.
3. ಜಾಗತಿಕ ಮಟ್ಟದಲ್ಲಿ ಕಂಪೆನಿಯ ಗುಣಮಟ್ಟವನ್ನು ಏರಿಸಲು ಸಿಕ್ಕಾ ಅವರಿಗೆ ಟಾರ್ಗೆಟ್ ನೀಡಿದ್ದೇವೆ. ಅದಕ್ಕೆ ತಕ್ಕಂತೆ ವೇತನ ಹೆಚ್ಚಳವಾಗಿದೆ.