ನವ ದೆಹಲಿ : ವೊಡಾಫೋನ್ ಐಡಿಯಾ ಬಳಕೆದಾರರಿಗೆ ಒಳ್ಳೆಯ ಸುದ್ದಿ ಬಂದಿದೆ. ಈಗ ಕೇವಲ 51 ರೂಪಾಯಿಗಳ ರೀಚಾರ್ಜ್ ಮೂಲಕ ಆರೋಗ್ಯ ವಿಮೆಯನ್ನು ಪಡೆಯಬಹುದು. ಅಂದರೆ, ಮೊಬೈಲ್ ರೀಚಾರ್ಜ್ ಮೂಲಕ ಆರೋಗ್ಯವನ್ನು ಸಹ ನೋಡಿಕೊಳ್ಳಬಹುದು. ಈ ಆರೋಗ್ಯ ವಿಮೆಯು ಕೋವಿಡ್ ಚಿಕಿತ್ಸೆಯನ್ನು ಸಹ ಒಳಗೊಂಡಿದೆ.
ವೊಡಾಫೋನ್ ಐಡಿಯಾ ತನ್ನ ಗ್ರಾಹಕರನ್ನು ಸೆಳೆಯಲು ಈ ಬಾರಿ ಸ್ವಲ್ಪ ವಿಭಿನ್ನ ಕೊಡುಗೆಯನ್ನೇ ನೀಡಿದೆ. ಕಂಪನಿಯು ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಮೊಬೈಲ್ ರೀಚಾರ್ಜ್ ಜೊತೆಗೆ ಆರೋಗ್ಯ ವಿಮೆಯನ್ನು ನೀಡಲು ನಿರ್ಧರಿಸಿದೆ. ಇದಕ್ಕಾಗಿ ಕಂಪನಿಯು 51 ಮತ್ತು 301 ರೂಗಳ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
ಕಂಪನಿಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹೊಸ ರೀಚಾರ್ಜ್ ಯೋಜನೆಯ ಹೆಸರು ವೊಡಾಫೋನ್ ಐಡಿಯಾ ಹಾಸ್ಪಿಕೇರ್ ಎಂದು ಹೇಳಿದೆ. ಪ್ರಿಪೇಯ್ಡ್ ಗ್ರಾಹಕರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.
ಟೆಲಿಕಾಂ ಕಂಪನಿಯು ಸಾಮಾನ್ಯ ಬಳಕೆದಾರರಿಗೆ ವಿಮೆ ಒದಗಿಸಲು ಆದಿತ್ಯ ಬಿರ್ಲಾ ಆರೋಗ್ಯ ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಂದರೆ, ಆದಿತ್ಯ ಬಿರ್ಲಾ ಈ ಎರಡು ರೀಚಾರ್ಜ್ ಯೋಜನೆಗಳೊಂದಿಗೆ ವಿಮೆಯನ್ನು ಒದಗಿಸಲಿದ್ದಾರೆ. ಮಾಹಿತಿಯ ಪ್ರಕಾರ, 51 ಮತ್ತು 301 ರೂಗಳ ಈ ಎರಡು ಯೋಜನೆಗಳಲ್ಲಿ, ಬಳಕೆದಾರರಿಗೆ 1000 ರೂ.ಗಳ ಆರೋಗ್ಯ ವಿಮೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
51 ರೂಪಾಯಿ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ 500 ಎಸ್ ಎಮ್ ಎಸ್ ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆಯ ವಾಲಿಡಿಟಿ 28 ದಿನಗಳು ಇರಲಿವೆ. 301 ರೂ.ಗಳ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಅಲ್ಲದೆ, ಪ್ರತಿದಿನ 1.5 ಜಿಬಿ ಡೇಟಾ ನೀಡಲಾಗುತ್ತಿದೆ. ಬಳಕೆದಾರರು 100 ಎಸ್ ಎಂ ಎಸ್ ಮಾಡಬಹುದು, ವ್ಯಾಲಿಡಿಟಿ 28 ದಿನಗಳು ಇರಲಿದೆ.
ಓದಿ : 12ನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಿ ಹೀರೋ ಆದ ಡೆಲಿವರಿ ಡ್ರೈವರ್!