Advertisement

ಪೊಲೀಸ್‌ ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ ; ವಯೋಮಿತಿ ಸಡಿಲಿಕೆಗೆ ಗೃಹ ಸಚಿವರ ಒಲವು?

03:11 AM Jun 25, 2020 | Hari Prasad |

ಬೆಂಗಳೂರು: ಜೀವನದಲ್ಲಿ ಖಾಕಿ ತೊಟ್ಟು ಪೊಲೀಸ್‌ ನೌಕರಿ ಮಾಡಬಯಸಿರುವ ಸಾವಿರಾರು ಯುವಕ, ಯುವತಿಯರ ಕನಸು ನನಸು ಮಾಡಲು ಸರಕಾರ ಮುಂದಾಗಿದೆ.

Advertisement

ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಸಮಯ ವಿಸ್ತರಣೆ ಮಾಡಿದ್ದರಿಂದ ವಯೋಮಿತಿ ಹೆಚ್ಚಾಗಿ ಸಾವಿರಾರು ಆಕಾಂಕ್ಷಿಗಳು ಅವಕಾಶ ವಂಚಿತರಾಗುತ್ತಿದ್ದರು.

ಆದರೆ ಈಗ ವಯೋಮಿತಿ ಸಡಿಲಿಕೆ ಮಾಡಬೇಕೆಂಬ ಆಕಾಂಕ್ಷಿಗಳ ಆಗ್ರಹಕ್ಕೆ ಗೃಹ ಇಲಾಖೆ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಿರಿಯ ಅಧಿಕಾರಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆನ್ನಲಾಗಿದ್ದು, ಮಾ. 31ರಿಂದಲೇ ವಯೋಮಿತಿಗೆ ಅರ್ಹತೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಆಗಿದ್ದೇನು?
ಪೊಲೀಸ್‌ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪೊಲೀಸ್‌ ಕಾನ್‌ಸ್ಟೆಬಲ್‌ ಸಿವಿಲ್‌ 558, ಸಶಸ್ತ್ರ ಕಾನ್‌ಸ್ಟೆಬಲ್‌ 444, ಪೊಲೀಸ್‌ ಕಾನ್‌ಸ್ಟೆಬಲ್‌ 2,007, ಸಶಸ್ತ್ರ ಪೊಲೀಸ್‌ ಕಾನ್‌ಸ್ಟೆಬಲ್‌ 1,005, ಕೆಎಸ್‌ಆರ್‌ಪಿಗೆ 2,420 ಹಾಗೂ ಕೆಎಸ್‌ಆರ್‌ಪಿ ಬ್ಯಾಂಡ್‌ಮನ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯ ಸರಕಾರ ಮಾರ್ಚ್‌ ಅಂತ್ಯದ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.

Advertisement

ಆದರೆ ಲಾಕ್‌ಡೌನ್‌ನಿಂ ದಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಿತ್ತು. ಆದರೆ ವಯೋಮಿತಿಯಲ್ಲಿ ಬದಲಾವಣೆ ಮಾಡಿರಲಿಲ್ಲ. ಇದರಿಂದಾಗಿ ಮಾರ್ಚ್‌ ಕೊನೆಗೆ 27 ವರ್ಷ ಭರ್ತಿಯಾದವರು ಅವಕಾಶ ವಂಚಿತರಾಗಿದ್ದರು. ಅಲ್ಲದೆ ಅರ್ಜಿ ಸಲ್ಲಿಸುವಾಗಲೆ ವಯೋಮಿತಿಗೆ ಸಂಬಂಧಿಸಿದ ದಾಖಲೆಯನ್ನು ಆನ್‌ ಲೈನ್‌ನಲ್ಲಿ ಅಪ್‌ಲೋಡ್ ‌ಮಾಡಬೇಕಿರುವುದರಿಂದ ಅವರ ವಯೋಮಿತಿ ಮೀರಿದೆ ಎಂದು ಆನ್‌ ಲೈನ್‌ನಲ್ಲಿ ಅರ್ಜಿಯನ್ನೇ ಸ್ವೀಕರಿಸದಿರುವುದರಿಂದ ಪೊಲೀಸ್‌ ನೌಕರಿಯ ಕನಸು ಕಂಡ ಯುವಕ, ಯುವತಿಯರು ಅಸಹಾಯಕರಾಗಿದ್ದರು.

ಲಾಕ್‌ಡೌನ್‌ ಪರಿಣಾಮ ಪೊಲೀಸ್‌ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದರೂ ವಯೋಮಿತಿ ಹೆಚ್ಚಳವಾಗದಿರುವ ಕುರಿತು ಹಿರಿಯ ಅಧಿಕಾರಿಗಳ ಜತೆ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ವಯೋಮಿತಿ ಸಡಿಲಿಸಿ ಮಾ. 31ರಿಂದಲೇ ಅರ್ಹತೆ ಪರಿಗಣಿಸುವ ಬಗ್ಗೆ ಚಿಂತನೆ ಇದೆ.

ರಾಜ್ಯ ಸರಕಾರ ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಲು ಎರಡು ವರ್ಷ ವಿನಾಯಿತಿ ನೀಡಿದೆ. ಕೋವಿಡ್ 19 ಸಂದರ್ಭ ಸಂಕಷ್ಟಕ್ಕೆ ಸಿಲುಕಿರುವ ಎಲ್ಲರಿಗೂ ಸರಕಾ ರಗಳು ವಿನಾಯಿತಿ ನೀಡುತ್ತಿವೆ. ಅದೇ ಮಾನದಂಡ ಪರಿಗಣಿಸಿ ಕಾನ್‌ಸ್ಟೆಬಲ್‌ ಹುದ್ದೆಗೆ ಲಾಕ್‌ಡೌನ್‌ ಸಮಯದ ಅವಧಿಯನ್ನು ವಯೋಮಿತಿ ಸಡಿಲಿಕೆ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರಕಾರ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next