Advertisement

ದುಷ್ಟ ಚಟುವಟಿಕೆ ನಿರ್ಮೂಲಕ್ಕೆ  ನಾಟಕ ಉತ್ತಮ ಸಂದೇಶ ಮಾರ್ಗ

11:46 AM Mar 11, 2017 | |

ಮಲ್ಪೆ: ಸುಮನಸರು ಎಂದರೆ ಸಂಸ್ಕೃತದಲ್ಲಿ ದೇವತೆಗಳು, ಒಳ್ಳೆಯ ಮನಸ್ಸಿನವನರು ಎಂದರ್ಥ. ನಾಟಕದ ಸೃಷ್ಟಿ ದೇವತೆಗಳಿಂದಲೇ ಪ್ರಾರಂಭವಾಗಿದೆ ಎಂದು ಪುರಾಣಗಳಲ್ಲಿ ತಿಳಿದುಬರುತ್ತದೆ. ದುಷ್ಟ ಚಟುವಟಿಕೆಗಳು ನಿರ್ಮೂಲನವಾಗಿ ಸದ್ಭಾವನೆ ಮೂಡುವ ನಿಟ್ಟಿನಲ್ಲಿ ನಾಟಕ ಉತ್ತಮ ಸಂದೇಶ ಮಾರ್ಗ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಕೇಂಜ ಶ್ರೀಧರ ತಂತ್ರಿ ಹೇಳಿದರು.

Advertisement

ಅವರು ಶುಕ್ರವಾರ ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು, ಉಡುಪಿ ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ ಹೊಸದಿಲ್ಲಿ ಹಾಗೂ ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಇದರ ಸಹಯೋಗದೊಂದಿಗೆ ಸುಮನಸಾ ಕೊಡವೂರು ಇವರು ಅಜ್ಜರಕಾಡು ಭುಜಂಗ ಪಾರ್ಕ್‌ನ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ “ರಂಗಹಬ್ಬ-5’ರ 7ನೇ ದಿನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮುಖ್ಯಅತಿಥಿಗಳಾಗಿ ತುಳುಕೂಟ ಉಡುಪಿ ಅಧ್ಯಕ್ಷ ಜಯಕರ್‌ ಶೆಟ್ಟಿ ಇಂದ್ರಾಳಿ, ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಮೇಟಿ ಮುದಿಯಪ್ಪ, ನಗರಸಭಾ ಸದಸ್ಯ ಯಶ್‌ಪಾಲ್‌ ಸುವರ್ಣ, ಉಡುಪಿ ಆರ್‌.ಆರ್‌.ಸಿ. ನಿರ್ದೇಶಕ ಹೇರಂಜೆ ಕೃಷ್ಣ ಭಟ್‌, ಉಡುಪಿ ಸಾಯಿ ರೆಸಿಡೆನ್ಸಿ ಆಡಳಿತ ನಿರ್ದೇಶಕ ದಾಮೋದರ್‌ ಸಿ. ಕುಂದರ್‌, ಉದ್ಯಮಿ ಗಳಾದ ಆನಂದ ಪಿ. ಸುವರ್ಣ, ಸಾಧು ಸಾಲಿಯಾನ್‌, ಸಂತೋಷ ಕೋಟ್ಯಾನ್‌, ಗೃಹರಕ್ಷಕ ದಳ ಉಡುಪಿ ಜಿಲ್ಲಾ ಕಮಾಂಡೆಂಟ್‌ ಡಾ| ಪ್ರಶಾಂತ್‌ ಶೆಟ್ಟಿ, ಉಡುಪಿ ನಿರ್ಮಿತಿ ಕೇಂದ್ರದ ಅಧ್ಯಕ್ಷ ಅರುಣ್‌ ಕುಮಾರ್‌, ಸುಮನಸಾದ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಸಂಚಾಲಕ ಭಾಸ್ಕರ್‌ ಪಾಲನ್‌ ಬಾಚನಬೈಲು ಉಪಸ್ಥಿತರಿದ್ದರು. 

ಪ್ರಕಾಶ್‌ ಜಿ. ಕೊಡವೂರು ಸ್ವಾಗತಿಸಿದರು, ರಾಧೇಶ್‌ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್‌ ಜಿ. ಕೊಡವೂರು ಪ್ರಾಸ್ತಾವನೆಗೈದರು. ದಯಾನಂದ ಯು. ಅವರು ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next