Advertisement

ಇಸ್ರೋ ಅಧ್ಯಕ್ಷ ಶಿವನ್‌ಗೆ ಅಭಿಮಾನದ ಹೂಮಳೆ

11:03 AM Oct 07, 2019 | Team Udayavani |

ಹೊಸದಿಲ್ಲಿ: ಹಿಂದೆ ವಿಜ್ಞಾನಿಗಳು ಎಲ್ಲದರೂ ಕಾಣಿಸಿ ಕೊಂಡರೆ, ಯಾರೂ ಅವರ ಬಳಿ ಹೋಗಿ ಆಟೋಗ್ರಾಫ್ ಕೇಳುತ್ತಿರಲಿಲ್ಲವೇನೋ?! ಈಗ, ವಿಜ್ಞಾನಿಗಳು ಜನರಿಗೆ ಚಿರಪರಿಚಿತರಾಗಿದ್ದಾರೆ. ಆಟೋಗ್ರಾಫ್ ಜಾಗಕ್ಕೆ ಸೆಲ್ಫಿಗಳು ಬಂದಿವೆ.

Advertisement

ಇದಕ್ಕೆ ಉದಾಹಣೆಯೆಂಬಂತೆ, ಇಸ್ರೋ ಅಧ್ಯಕ್ಷ ಕೆ. ಶಿವನ್‌, ಇಂಡಿಗೋ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸುವಾಗ ಇಂಥ ದ್ದೊಂದು “ಫ್ಯಾನ್‌ ಮೊಮೆಂಟ್‌’ ಘಟನೆ ನಡೆದಿದೆ. ಶಿವನ್‌ ಅವರು ಕ್ಯಾಬಿನ್‌ನೊಳಕ್ಕೆ ಕಾಲಿಡುತ್ತಿದ್ದಂತೆಯೇ, ವಿಮಾನದ ಸಿಬಂದಿಯು ಅವರನ್ನು ಗುರುತಿಸಿ, ಅವರ ಕೈ ಕುಲುಕಿಸಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದೇ ವಿಮಾನದಲ್ಲಿದ್ದ ಪ್ರಯಾಣಿಕರು ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದಾರೆ. ಇಸ್ರೋದ ಅಧ್ಯಕ್ಷರಾಗಿದ್ದರೂ, ಅಂದು ಶಿವನ್‌, ಎಕಾನಮಿ ಕ್ಲಾಸ್‌ನಲ್ಲಿ (ಸಾಮಾನ್ಯ ವರ್ಗ) ಪ್ರಯಾಣಿಸಲು ಆಗಮಿಸಿದ್ದನ್ನು ಹಲವಾರು ಮಂದಿ ಕೊಂಡಾಡಿದ್ದಾರೆ. ಶಿವನ್‌ ನೇತೃತ್ವದ “ಚಂದ್ರಯಾನ-2′ ಸಾಹಸವನ್ನು ನೆನೆದು ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಚಪ್ಪಾಳೆಯ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next