Advertisement

ಶುದ್ಧ ಕಾಯಕದಿಂದ ನೆಮ್ಮದಿ

12:38 PM May 22, 2019 | Suhan S |

ಬಾಗಲಕೋಟೆ: ಕಾರ್ಯ ಎಂಬುದು ದೇಹ ಮತ್ತು ಮನಸ್ಸಿನ ಸಮತೋಲನ ಕಾಯುವ ಸಾಧನ. ಕಾರ್ಯದಿಂದ ಬಂದ ಹಣವನ್ನು ದಾನ ಕೊಟ್ಟನೆಂಬ ಅಹಂಕಾರ ತಪ್ಪಿಸಲು ಶರಣರು ದಾಸೋಹ ಪದ್ಧತಿ ಜಾರಿಗೆ ತಂದಿದ್ದಾರೆ ಎಂದು ವೈದ್ಯ, ಸಾಹಿತಿ ಡಾ| ಶಿವಾನಂದ ಕುಬಸದ ಹೇಳಿದರು.

Advertisement

ನಗರದ ಚರಂತಿಮಠದಲ್ಲಿ ಹುಣ್ಣಿಮೆ ನಿಮಿತ್ತ 40ನೇ ಶಿವಾನುಭವ ಗೋಷ್ಠಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸಕರಾಗಿ ಅವರು ಮಾತನಾಡಿದರು.

ವೈದಿಕ ಸಂಸ್ಕೃತಿಯಲ್ಲಿ ಕಾಣುವ ವರ್ಗ, ವರ್ಣ ಅಸಮಾನತೆಗಳ ವಿರುದ್ಧ ಹೋರಾಡಲು ವಚನ ಚಳುವಳಿ ನಡೆಸಿದರು. ಭಕ್ತಿಯ ಗುರಿ ಮೋಕ್ಷವಾದರೆ ವಚನಗಳು ಸಮಾಜದಲ್ಲಿ ಬದುಕಲು ಹಾಗೂ ಸಮಾನತೆಗಾಗಿ ಹೋರಾಡಿ, ಕೂಡಿ ಬಾಳಲು ಸಹಾಯ ಮಾಡುತ್ತವೆ ಎಂದರು.

ಇನ್ನೊಬ್ಬ ಅತಿಥಿ ಡಾ|ಯೋಗಪ್ಪನವರ ಮಾತನಾಡಿ, ಹಳೆಗನ್ನಡ ಪಂಪ ಭಾಷೆಗಳು ಜನರಿಗೆ ಅರ್ಥವಾಗುತ್ತಿದ್ದಲ್ಲ. ಜನಸಾಮಾನ್ಯರಿಗೆ ತಿಳಿಯಲು ಸರಳ ಭಾಷೆಯಲ್ಲಿ ವಚನಗಳನ್ನು ಶರಣರು ರಚಿಸಲು ಬಹಳ ಶ್ರಮಪಟ್ಟರು. ತಂದೆ-ತಾಯಿಗಳ ಸೇವೆ ದೇವರ ಭಕ್ತಿಗಿಂತ ಮೀಗಿಲು ಎಂದರು.

ಸಾನ್ನಿಧ್ಯ ವಹಿಸಿದ್ದ ಹಾವೇರಿ ಜಿಲ್ಲೆ ಬೊಮ್ಮನಹಳ್ಳಿಯ ವಿರಕ್ತಮಠದ ಶಿವಯೋಗಿ ಸ್ವಾಮೀಜಿ ಮಾತನಾಡಿ, ಇಂದಿನ ಆಧುನಿಕ ಮೋಹಕ್ಕೆ ಸಿಲುಕಿ ತಪ್ಪು ದಾರಿ ಇಡುತ್ತಿರುವ ಯುವ ಜನಾಂಗಕ್ಕೆ ವಚನಗಳ ಅಧ್ಯಯನ ಉತ್ತಮ ಜೀವನಕ್ಕೆ ಆಧಾರವಾಗುತ್ತವೆ ಎಂದು ಹೇಳಿದರು.

Advertisement

ಅಲ್ಲಮಪ್ರಭು ಹೈಟಿಕ್‌ ಆಸ್ಪತ್ರೆ ವತಿಯಿಂದ ಡಾ|ಪ್ರಭುಸ್ವಾಮಿ ಮಠ ಅವರು ವೈದ್ಯ ಡಾ| ಕೆರೂಡಿ ದಂಪತಿಯನ್ನು ಸನ್ಮಾನಿಸಿದರು. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎ.ಎಸ್‌. ಪಾವಟೆ, ಜಿ.ಬಿ. ವೀರಭದ್ರಯ್ಯ ಉಪಸ್ಥಿತರಿದ್ದರು. ಸಾಂಚಿ ಗುಂಡಾ ಪ್ರಾರ್ಥಿಸಿದರು. ಡಾ| ಪ್ರಭುಸ್ವಾಮಿ ಪ್ರಭುಸ್ವಾಮಿಮಠ ಸ್ವಾಗತಿಸಿದರು. ಶಿವಾನಂದ ಪೂಜಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next