Advertisement

ರಮೋಸ್‌ ಹ್ಯಾಟ್ರಿಕ್‌; ಪೋರ್ಚುಗಲ್‌ ಅರ್ಧ ಡಜನ್‌ ಗೋಲ್‌

11:09 PM Dec 07, 2022 | Team Udayavani |

ದೋಹಾ: ಕೋಚ್‌ ಫೆರ್ನಾಂಡೊ ಸ್ಯಾಂಟೋಸ್‌ ತೆಗೆದು ಕೊಂಡ ದಿಟ್ಟ ಹಾಗೂ ಗ್ಯಾಂಬ್ಲಿಂಗ್‌ ನಿರ್ಧಾರವೊಂದು ಪೋರ್ಚುಗಲ್‌ ಪಾಲಿಗೆ ಬಂಪರ್‌ ಫ‌ಸಲನ್ನು ತಂದಿತ್ತಿದೆ. ಅದು ಫಿಫಾ ವಿಶ್ವಕಪ್‌ ಕೂಟದ ಅಂತಿಮ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವಿಜರ್ಲೆಂಡ್‌ಗೆ 6-1 ಗೋಲುಗಳ ಬೃಹತ್‌ ಸೋಲುಣಿಸಿ ಅಸಾಮಾನ್ಯ ಸಾಹಸಗೈದಿದೆ.

Advertisement

ಕೋಚ್‌ ಫೆರ್ನಾಂಡೊ ಸ್ಯಾಂಟೋಸ್‌ ಕೈಗೊಂಡ ನಿರ್ಧಾರ ವೆಂದರೆ ಸ್ಟಾರ್‌ ಆಟಗಾರ ಕ್ರಿಸ್ಟಿ ಯಾನೊ ರೊನಾಲ್ಡೊ ಅವರನ್ನು ಬೆಂಚ್‌ ಮೇಲೆ ಕೂರಿಸಿ 21ರ ಹರೆಯದ ಗೊನ್ಸಾಲೊ ರಮೋಸ್‌ ಅವರನ್ನು ಆಡಿಸಿದ್ದು, ಅವರು ಈ ಕೂಟದ ಮೊದಲ ಹ್ಯಾಟ್ರಿಕ್‌ ಗೋಲು ಬಾರಿಸಿ ಮೆರೆದದ್ದು! ರೊನಾಲ್ಡೊ ಅಂಗಳಕ್ಕಿಳಿಯುವಾಗ ಪೋರ್ಚುಗಲ್‌ ಆಗಲೇ 5 ಗೋಲು ಹೊಡೆದಾಗಿತ್ತು.

ಗೊನ್ಸಾಲೊ ರಮೋಸ್‌ 17ನೇ ನಿಮಿಷದಲ್ಲಿ ಪೋರ್ಚುಗಲ್‌ನ ಗೋಲು ಖಾತೆ ತೆರೆದರು. ಬಳಿಕ 51ನೇ ಹಾಗೂ 67ನೇ ನಿಮಿಷದಲ್ಲಿ ಮತ್ತೆರಡು ಗೋಲು ಸಿಡಿಸಿದರು. ಉಳಿದ ಗೋಲುವೀರರೆಂದರೆ, ತಂಡದ ಅತೀ ಹಿರಿಯ ಆಟಗಾರ ಪೆಪೆ (33ನೇ ನಿಮಿಷ), ರಫೆಲ್‌ ಗ್ವೆರೀರೊ(55ನೇ ನಿಮಿಷ) ಮತ್ತು ರಫೆಲ್‌ ಲಿಯೊ (90 +2ನೇ ನಿಮಿಷ). ಪೋರ್ಚುಗಲ್‌ 4 ಗೋಲು ಬಾರಿ ಸಿದ ಬಳಿಕ ಸ್ವಿಜರ್ಲೆಂಡ್‌ ಶಾಸ್ತ್ರ ವೊಂದನ್ನು ಪೂರೈಸಿತು. ಮ್ಯಾನ್ಯು ವೆಲ್‌ ಅಕಾಂಜಿ 58ನೇ ನಿಮಿಷದಲ್ಲಿ ಗೋಲೊಂದನ್ನು ಹೊಡೆದರು.

ಇದು ಈ ವಿಶ್ವಕಪ್‌ನಲ್ಲಿ ದಾಖ ಲಾದ ಅತೀ ದೊಡ್ಡ ಗೆಲುವು. ಈ ಹೆಗ್ಗಳಿಕೆಯೊಂದಿಗೆ ಪೋರ್ಚುಗಲ್‌ 2006ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್‌!
5 ಬಾರಿಯ ಬ್ಯಾಲನ್‌ ಡಿ’ಓರ್‌ ಪ್ರಶಸ್ತಿ ಪುರಸ್ಕೃತ ರೊನಾಲ್ಡೊ ಅವರನ್ನು ಹೊರಗೆ ಕುಳ್ಳಿರಿಸಿ ಬಂದ ಗೊನ್ಸಾಲೊ ರಮೋಸ್‌ ಪೋರ್ಚು ಗಲ್‌ ಫ‌ುಟ್‌ಬಾಲ್‌ನ ನೂತನ ಸ್ಟಾರ್‌. “ಸಾಕರರ್‌’ ಎಂಬುದು ಈ ಪ್ರತಿಭಾನ್ವಿತನ ನಿಕ್‌ ನೇಮ್‌.
ವಿಶ್ವಕಪ್‌ ಆರಂಭಕ್ಕೂ ಕೇವಲ 3 ದಿನಗಳ ಹಿಂದೆ ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ಗೆ ಪದಾರ್ಪಣೆ ಮಾಡಿ ದ್ದರು. ಅದು ನೈಜೀರಿಯ ಎದುರಿನ ಕೊನೆಯ ಅಭ್ಯಾಸ ಪಂದ್ಯವಾಗಿತ್ತು. 2 ಗೋಲು ಬಾರಿಸಿದ ರಮೋಸ್‌ ಆಗಲೇ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದ್ದರು.

Advertisement

ರಮೋಸ್‌ ವಿಶ್ವಕಪ್‌ ಗ್ರೂಪ್‌ ಹಂತದ ಸ್ಪರ್ಧೆಗಳಲ್ಲಿ 10 ನಿಮಿಷ ವಷ್ಟೇ ಬದಲಿ ಆಟಗಾರನಾಗಿ ಕಾಣಿಸಿ ಕೊಂಡಿದ್ದರು. ಸ್ವಿಜರ್ಲೆಂಡ್‌ ವಿರುದ್ಧ ಮೊದಲ ಆಯ್ಕೆಯಲ್ಲೇ ಅವಕಾಶ ಪಡೆದರು. ಇದರೊಂದಿಗೆ 20 ವರ್ಷಗಳ ಬಳಿಕ ಮೊದಲ ವಿಶ್ವಕಪ್‌ ಪಂದ್ಯದಲ್ಲೇ ಹ್ಯಾಟ್ರಿಕ್‌ ಸಾಧಿಸಿದ ಆಟಗಾರನೆನಿಸಿದರು. 2002ರ ಸೌದಿ ಅರೇಬಿಯ ಎದುರಿನ ಪಂದ್ಯದಲ್ಲಿ ಜರ್ಮನಿಯ ಮಿರೋಸ್ಲಾವ್‌ ಕ್ಲೋಸ್‌ ಈ ಸಾಧನೆಗೈದಿದ್ದರು.

ಇದು ಫಿಫಾ ವಿಶ್ವಕಪ್‌ ಇತಿಹಾಸದ 53ನೇ ಹ್ಯಾಟ್ರಿಕ್‌ ನಿದರ್ಶನ. ಪೋರ್ಚುಗಲ್‌ ಆಟಗಾರರ 4ನೇ ಹ್ಯಾಟ್ರಿಕ್‌ ಸಾಧನೆ. 1966ರಲ್ಲಿ ಡಿಆರ್‌ಪಿ ಕೊರಿಯಾ ವಿರುದ್ಧ ಇಸೆಬಿಯೊ, 2002ರಲ್ಲಿ ಪೋಲೆಂಡ್‌ ವಿರುದ್ಧ ಪೌಲೇಟ ಹಾಗೂ 2018ರಲ್ಲಿ ಸ್ಪೇನ್‌ ವಿರುದ್ಧ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್‌ ಪರ ಹ್ಯಾಟ್ರಿಕ್‌ ಬಾರಿಸಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next