Advertisement
ಒಂದು ವೇಳೆ ಅವರು ಬಿ ಮಾದರಿ ಪರೀಕ್ಷೆಯಲ್ಲೂ ವಿಫಲವಾದರೆ 4 ವರ್ಷಗಳ ಕಾಲ ನಿಷೇ ಧಕ್ಕೊಳಗಾಗಲಿದ್ದಾರೆ. ಆಗ ಏಶ್ಯನ್ ಚಾಂಪಿಯನ್‌ಶಿಪ್ 800 ಮೀ. ಓಟದಲ್ಲಿ ಗೋಮತಿ ಗೆದ್ದಿರುವ ಚಿನ್ನದ ಪದಕ ರದ್ದಾಗಲಿದೆ. ಅಲ್ಲಿಗೆ ಭಾರತದ ಪದಕಗಳ ಸಂಖ್ಯೆ 2 ಚಿನ್ನ, 7 ಬೆಳ್ಳಿ, 7 ಕಂಚಿಗೆ ಸೀಮಿತಗೊಳ್ಳಲಿದೆ.
ಗೋಮತಿ ಹಿಂದೆಯೇ ಒಮ್ಮೆ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಮಾ. 15ರಿಂದ 18ರ ವರೆಗೆ ಪಟಿಯಾಲದಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ ಆಕೆಯನ್ನು ಪರೀಕ್ಷೆ ಗೊಳಪಡಿಸಿದ್ದಾಗ, ಅಲ್ಲಿ ಆಕೆ ಉದ್ದೀಪನ ಸೇವಿಸಿದ್ದು ಖಾತ್ರಿಯಾಗಿತ್ತು. ಆದರೆ ಅದನ್ನು ಸಕಾಲದಲ್ಲಿ ಭಾರತೀಯ ಆ್ಯತ್ಲೆಟಿಕ್ಸ್ ಒಕ್ಕೂಟದ ಗಮನಕ್ಕೆ ತರಲು ನಾಡಾ (ಭಾರತ ಉದ್ದೀಪನ ನಿಗ್ರಹ ಸಂಸ್ಥೆ) ವಿಫಲವಾಗಿತ್ತು. ಇದರಿಂದ ಆಕೆ ಮತ್ತೆ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿತ್ತು. ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾತನಾಡಿ, “ನಾಡಾ ಆಗಲೇ ನಮಗೆ ಮಾಹಿತಿ ನೀಡಿದ್ದರೆ, ಗೋಮತಿ ಏಶ್ಯನ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳುವುದನ್ನು ತಡೆಯಬಹುದಿತ್ತು. ದೇಶಕ್ಕಾಗುವ ಅವಮಾನವನ್ನೂ ತಪ್ಪಿಸಬಹುದಿತ್ತು. ಒಂದು ತಿಂಗಳು ಸಮಯವಿದ್ದರೂ ನಾಡಾ ನಮಗೆ ತಿಳಿಸಿಲ್ಲ’ ಎಂದು ಹೇಳಿದ್ದಾರೆ.