Advertisement

ವಿವಾದಿತ ಕಸದ ಮೇಲೆ ಗಾಲ್ಫ್ ವೈಭವ!

11:53 AM Apr 24, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉತ್ಪತ್ತಿಧಿಯಾಧಿಗುತ್ತಿರುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಸೋತಿರುವ ಬಿಬಿಎಂಪಿ, ತಾತ್ಕಾಲಿಕ ಪರಿಹಾರಗಳಿಗೆ ಮುಂದಾಗುತ್ತಿದೆ. ವೈಜ್ಞಾನಿಕ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುವ ಬದಲು ಭೂ ಭರ್ತಿಯಂತಹ (ಲ್ಯಾಂಡ್‌ಫಿಲ್‌) ಸುಲಭ ಕ್ರಮಗಳಿಗೆ ಮುಂದಾಗುತ್ತಿರುವುದು ಮತ್ತೆ ನಗರದಲ್ಲಿ ಮತ್ತೆ ತ್ಯಾಜ್ಯ ಸಮಸ್ಯೆ ಎದುರಾಗುವ ಆತಂಕ ಮೂಡಿಸಿದೆ. 

Advertisement

ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಮಾಡಲು ಕೋಟ್ಯಂತರ ರೂ. ವೆಚ್ಚ ಮಾಡಿ ಪಾಲಿಕೆಯಿಂದ ಆರು ಹೊಸ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ನಿರ್ಮಿಸಿದರೂ ನಗರದಲ್ಲಿ ತ್ಯಾಜ್ಯ ಸಮಸ್ಯೆ ಕೊನೆಯಾಗುತ್ತಿಲ್ಲ. ಈಗಾಗಲೇ ಕೆಲ ಘಟಕಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೆ ತ್ಯಾಜ್ಯವನ್ನು ಭೂಮಿಯೊಳಗೆ ಮುಚ್ಚಿಹಾಕಲು ಮುಂದಾಗಿದ್ದಾರೆ. 

ಮಂಡೂರು, ಮಾವಳ್ಳಿಪುರದಲ್ಲಿ ಅವೈಜ್ಞಾನಿಕವಾಗಿ ಲಕ್ಷಾಂತರ ಟನ್‌ ತ್ಯಾಜ್ಯ ಹಾಕಿದ್ದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿತ್ತು. ತ್ಯಾಜ್ಯದ ಲಿಚೆಟ್‌ ನೀರು ಅಂತರ್ಜಲ ಸೇರಿ ಸುತ್ತಮುತ್ತಲಿನ ಭಾಗಗಳಲ್ಲಿ ಕಾಯಿಲೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಲಿಕೆ ವಿರುದ್ಧ ಸಿಡಿದೆದ್ದ ಜನರು ಪ್ರತಿಭಟನೆ ನಡೆಸಿದ್ದರಿಂದಾಗಿ ಲ್ಯಾಂಡ್‌ಫಿಲ್‌ಗ‌ಳಿಗೆ ತ್ಯಾಜ್ಯ ಸುರಿಯುವುದು ನಿಲ್ಲಸಬೇಕಾಯಿತು.

ಇದೀಗ ಮತ್ತೆ ತ್ಯಾಜ್ಯವನ್ನು ಭೂ ಭರ್ತಿಗಳಿಗೆ ಸುರಿಯುವ ಕೆಲಸಗಳು ಹೆಚ್ಚಾಗುತ್ತಿದ್ದು, ಒಂದೊಮ್ಮೆ ಸ್ಥಳೀಯರು ಪ್ರತಿಭಟನೆಗೆ ಮುಂದಾದರೆ ಮತ್ತೆ ನಗರವನ್ನು ತ್ಯಾಜ್ಯ ಸಮಸ್ಯೆ ಕಾಡಲಿದೆ. ಹೊಸ ಆರು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ವಹಿಸುವಲ್ಲಿ ವಿಫ‌ಲವಾಗಿರುವ ಪಾಲಿಕೆಯ ಅಧಿಕಾರಿಗಳು ಲ್ಯಾಂಡ್‌ಫಿಲ್‌ಗ‌ಳಿಗೆ ಆದ್ಯತೆ ನೀಡುತ್ತಿದ್ದಾರೆ.

ಅದರ ಹಿನ್ನೆಲೆಯಲ್ಲಿ ಈಗಾಗಲೇ ನ್ಯಾನಸಂದ್ರ ಬಂಡೆ, ಮೈಲಸಂದ್ರ ಕ್ವಾರಿಗಳು ಭರ್ತಿಯಾಗಿದ್ದು, ಬೆಲ್ಲಹಳ್ಳಿ, ಮಿಟ್ಟಗಾನಹಳ್ಳಿ ಕ್ವಾರಿಗಳಿಗೆ ಕಸ ಸುರಿಯಲಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಎರಡೂ ಕ್ವಾರಿಗಳು ಭರ್ತಿಯಾಗಲಿರುವ ಹಿನ್ನೆಲೆಯಲ್ಲಿ ಮತ್ತೆ ಹೊಸದಾಗಿ ಬೆಲ್ಲಹಳ್ಳಿ ಸಮೀಪ ಮತ್ತೂಂದು ಕ್ವಾರಿ ಗುರುತಿಸಿದೆ. ಪಾಲಿಕೆಯ ಅಧಿಕಾರಿಗಳು ವೈಜ್ಞಾನಿಕ ವಿಲೇವಾರಿಗಿಂತ, ಕ್ವಾರಿಗಳಿಗೆ ತ್ಯಾಜ್ಯ ಸುರಿಯಲು ಮಹತ್ವ ನೀಡುಧಿತ್ತಿರುವುದು ಅಪಾಯಕಾರಿಯಾಗಿದೆ.

Advertisement

ಇಷ್ಟೆಲ್ಲ ಅವೈಜ್ಞಾನಿಕ ಕ್ರಮಗಳಿಂದ ಟೀಕೆಗಳಿಗೆ ಗುರಿಯಾಗಿರುವ ಬಿಬಿಎಂಪಿ ಅದರ ನಡುವೆಯೇ ತ್ಯಾಜ್ಯ ಸಮಸ್ಯೆ ಸುಧಾರಣಾ ಕ್ರಮಗಳಿಗೆ ಮುಂದಾಗಿದೆ. ಜತೆ ಜತೆಗೆ ಈ ಹಿಂದೆ ತ್ಯಾಜ್ಯ ಸುರಿದು ಸಾರ್ವಜನಿಕರ ಕೋಪಕ್ಕೆ ಗುರಿಯಾಗಿದ್ದಂತಹ ಸ್ಥಳಗಳ ಅಭಿವೃದ್ಧಿಗೂ ಮಹತ್ವ ನೀಡಿ, ಆ ಭಾಗಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿರುವುದು ಸಮಾಧಾನಕರ ಸಂಗತಿಯಾಗಿದೆ. 

ಮಂಡೂರಿನಲ್ಲಿ ಪ್ರತಿಷ್ಠಿತರ ಆಟದ ಮೈದಾನ!
ಮಂಡೂರು ಕಸ ವಿಲೇವಾರಿ ಘಟಕವನ್ನು ಗಾಲ್ಫ್ಕೋರ್ಟ್‌ ಆಗಿ ಮಾರ್ಪಡಿಸಲು ಸರ್ಕಾರ ಚಿಂತನೆ ನಡೆಸಿದೆ. ಬಿಬಿಎಂಪಿಯಿಂದ ಲಕ್ಷಾಂತರ ಟನ್‌ ತ್ಯಾಜ್ಯ ಸುರಿದ ಪರಿಣಾಮ ಮಂಡೂರಿನಲ್ಲಿ ತ್ಯಾಜ್ಯದ ಗುಡ್ಡಗಳು ನಿರ್ಮಾಣವಾಗಿದ್ದು, ಸ್ಥಳೀಯರ ಪ್ರತಿಭಟನೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಘಟಕದಲ್ಲಿನ ಬಹುತೇಕ ತ್ಯಾಜ್ಯವನ್ನು ಮಣ್ಣಿನಿಂದ ಮುಚ್ಚಿದ್ದು, ಎರಡು ಮೂರು ಎಕರೆ ಜಾಗದಲ್ಲಿ ಮಾತ್ರವೇ ಮಣ್ಣು ಹಾಕಬೇಕಿದೆ.

ಆ ಮೂಲಕ ಮುಂದಿನ ದಿನಗಳಲ್ಲಿ ಘಟಕವನ್ನು ಗಾಲ್ಫ್ ಕೋರ್ಟ್‌ ಆಗಿ ಅಭಿವೃದ್ಧಿಪಡಿಸುವುದಾಗಿ ಅಧಿಕಾರಿ ತಿಳಿಸಿದ್ದಾರೆ. ತ್ಯಾಜ್ಯದಿಂದ ವಿದ್ಯುತ್‌ ತಯಾರಿಕೆ ಮಾಡುವ ಉದ್ದೇಶದಿಂದ ಮಂಡೂರು ಬಳಿ ಸುಮಾರು 150 ಎಕರೆ ಜಮೀನನಲ್ಲಿ ಎರಡು ತ್ಯಾಜ್ಯ ವಿಲೇವಾರಿ ಘಟಕಗಳನ್ನು ಪಾಲಿಕೆಯಿಂದ ನಿರ್ಮಿಸಲಾಗಿತ್ತು. ಆದರೆ ತ್ಯಾಜ್ಯದಿಂದ ವಿದ್ಯುತ್‌ ತಯಾರಿಸದೆ ತ್ಯಾಜ್ಯ ಗುಡ್ಡಗಳನ್ನು ನಿರ್ಮಿಸಿದ್ದರಿಂದ ಘಟಕಗಳನ್ನ ಸ್ಥಳೀಯರು ಮುಚ್ಚಿಸಿದ್ದಾರೆ.

ಮಂಡೂರಿನಲ್ಲಿರುವ ತ್ಯಾಜ್ಯವನ್ನು ಬೇರೆಡೆ ಸ್ಥಳಾಂತರ ಮಾಡುವುದಾಗಿ ತಿಳಿಸಿದರಾದರೂ, ಅದು ಸಾಧ್ಯವಾಗದ ಹಿನ್ನೆಲೆಧಿಯಲ್ಲಿ ತ್ಯಾಜ್ಯವನ್ನು ಈಗ  ಮಣ್ಣಿನಿಂದ ಮುಚ್ಚಲಾಗಿದೆ. ಈಗಾಗಲೇ ಮಲೇಷ್ಯಾ, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ತ್ಯಾಜ್ಯದ ಗುಡ್ಡಗಳ ಮೇಲೆ ಮಣ್ಣಿನ ಪದರಗಳನ್ನು ನಿರ್ಮಿಸಿ, ಗಾಲ್ಫ್ ಕೋರ್ಟ್‌ಗಳಾಗಿ ನಿರ್ಮಾಣ ಮಾಡಲಾಗಿದೆ. 

ಆದೇ ಮಾದರಿಯಲ್ಲಿ ಮಂಡೂರು ಘಟಕವನ್ನೂ ಗಾಲ್ಫ್ಕೋರ್ಟ್‌ ಮಾಡಲು ಚಿಂತನೆ ನಡೆಸಲಾಗಿದ್ದು, ಇತ್ತೀಚೆಗೆ ಚೆನ್ನೈ ಮೂಲದ ತಜ್ಞರು ಮಂಡೂರು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಕೊಂಡು ಹೋಗಿದ್ದಾರೆ. ಗಾಲ್ಫ್ಕೋರ್ಟ್‌ ನಿರ್ಮಾಣಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಿ ಕೊಡುವುದಾಗಿ ತಜ್ಞರು ತಿಳಿಸಿದ್ದು, ವರದಿ ಬಂದ ನಂತರ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪಾಲಿಕೆಯಿಂದ ಕೆಲವೊಂದು ಕಡೆಗಳಲ್ಲಿ ಕ್ವಾರಿಗಳಿಗೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಈಗಾಗಲೇ ನ್ಯಾನಪುರ ಬಂಡೆ ಹಾಗೂ ಮೈಲಸಂದ್ರ ಕ್ವಾರಿಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಮಣ್ಣಿನಿಂದ ಮುಚ್ಚಿ ನ್ಯಾನಪುರಬಂಡೆ ಕ್ವಾರಿಯನ್ನು ಕ್ರಿಕೆಟ್‌ ಮೈದಾನವಾಗಿ ನಿರ್ಮಿಸಲಾಗುತ್ತಿದೆ. ಜತೆಗೆ ಮೈಲಸಂದ್ರ ಕ್ವಾರಿಯನ್ನು ಈಗಾಗಲೇ ಉದ್ಯಾನವಾಗಿ ಮಾರ್ಪಡಿಸಲಾಗಿದ್ದು, ಚೆನ್ನೈ ಮೂಲಕ ತಜ್ಞರು ಮಂಡೂರು ಘಟಕದ ಜಾಗವನ್ನು ಪರಿಶೀಲಿಸಿ ಗಾಲ್ಫ್ಕೋರ್ಟ್‌ ಮಾಡುವ ಬಗ್ಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. 
-ಸಫ‌ರಾಜ್‌ ಖಾನ್‌, ಜಂಟಿ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ ಮತ್ತು ಆರೋಗ್ಯ)

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next