Advertisement

Sirsi ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್‌ನ ಸುವರ್ಣ ಮಹೋತ್ಸವ

07:31 PM May 18, 2023 | Team Udayavani |

ಶಿರಸಿ: ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲೊಂದಾದ, ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮವು ಮೇ 20 ಹಾಗೂ 21 ರಂದು ಪ್ರೌಢಶಾಲೆಯ ಆವಾರದಲ್ಲಿ ನಡೆಯಲಿದೆ.

Advertisement

ಮೇ 20 ರ ಮಧ್ಯಾಹ್ನ 3 ಗಂಟೆಗೆ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಹೆಗಡೆ ಹೊನ್ನೆಕಟ್ಟಾ ಅಧ್ಯಕ್ಷತೆ ವಹಿಸುವರು. ಎಂ.ಇ.ಎಸ್. ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಹೆಗಡೆಕಟ್ಟಾ ಗ್ರಾ.ಪಂ. ಅಧ್ಯಕ್ಷೆ ವೀಣಾ ಭಟ್ಟ ಹಾಗೂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ, ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ವಿ.ಪಿ. ಹೆಗಡೆ ಹನ್ಮಂತಿ ಉಪಸ್ಥಿತರಿರುವರು.

ಮೇ 21ರ ಬೆಳಗ್ಗೆ 10.30ರಿಂದ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಎಂಬ ವಿಷಯದ ಕುರಿತು ಚಿಂತನ ಗೋಷ್ಠಿ ನಡೆಯುವುದು. ಗೋಷ್ಠಿಯನ್ನು ವಿ.ಪ. ಸದಸ್ಯ ಪ್ರೊ. ಎಸ್. ವಿ. ಸಂಕನೂರು ಉದ್ಘಾಟಿಸುವರು‌. ವಿ.ಪಿ. ಹೆಗಡೆ ಹನ್ಮಂತಿ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಮಾಧ್ಯಮಿಕ ಶಿಕ್ಷಣ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ದೈಮನೆ ಉಪಸ್ಥಿತರಿರುವರು. ಶಾಲೆಯ ಹಳೆಯ ವಿದ್ಯಾರ್ಥಿಗಳಾದ ವಿ.ಎಂ. ಭಟ್ ಶಿರಸಿ, ಕಿಶೋರ್ ಹೆಬ್ಬಾರ್ ಬೆಂಗಳೂರು, ಗೋಪಾಲಕೃಷ್ಣ ರಾ. ಹೆಗಡೆ ಹೆಗಡೆಕೇರಿ ಹಾಗೂ ಇತರ ಶಿಕ್ಷಣಾಸಕ್ತರು ಗೋಷ್ಠಿಯಲ್ಲಿ ವಿಷಯ ಪ್ರಸ್ತುತ ಪಡಿಸುವರು ಎಂದು ತಿಳಿಸಲಾಗಿದೆ.

ಮೇ 21 ರ ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ವಿ.ಪ. ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಹೆಚ್‌ಡಿಎಫ್‌ಸಿ ಬ್ಯಾಂಕಿನ ನಿವೃತ್ತ ಸೀನಿಯರ್ ವೈಸ್ ಪ್ರೆಸಿಡೆಂಟ್ ಹಾಗೂ ಮ್ಯಾನೇಜ್‌ಮೆಂಟ್ ಕನ್ಸಲ್ಟಂಟ್ ಮಧುಸೂದನ ಹೆಗಡೆ ಮರಿಯಜ್ಜನಮನೆ ಮತ್ತು ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಹೆಗಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಸಂಸ್ಥೆಯ ಅಧ್ಯಕ್ಷ ಎಂ. ಆರ್. ಹೆಗಡೆ ಹೊನ್ನೆಕಟ್ಟಾ ಅಧ್ಯಕ್ಷತೆ ವಹಿಸುವರು. ವಿ.ಪಿ. ಹೆಗಡೆ ಹನ್ಮಂತಿ ಉಪಸ್ಥಿತರಿರುವರು.

ಸಮಾರೋಪ ಸಮಾರಂಭದ ನಂತರ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 10.30 ರಿಂದ ಆರ್‌.ಟಿ. ಹೆಗಡೆ ತೀರ್ಥಗಾನ ಹಾಗೂ ಸುಬ್ರಾಯ ಹೆಗಡೆ ಕಲ್ಲರೆಗದ್ದೆ ನಿರ್ದೇಶನದಲ್ಲಿ ಸಹೋದರರು ಹಾಕಿದ ಸವಾಲ್ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯುವುದು. ನಾಟಕಕ್ಕೆ ಕುಮಟಾದ ಗೋಪಾಲಕೃಷ್ಣ ಡ್ರಾಮಾ ಸೀನ್ಸ್ ಅವರ ರಂಗಸಜ್ಜಿಕೆ ಹಾಗೂ ಕೋಡ್ಲಿಯ ಸು.ವೇ. ಗ ಕಲಾವೃಂದದ ಸಂಗೀತವಿರಲಿದೆ. ಸೀತಾರಾಮ ಸರಕುಳಿ, ಗಣೇಶ ಯಡಳ್ಳಿ, ಸುಬ್ಬಣ್ಣ ಕಲ್ಲರೆಗದ್ದೆ, ರಾಜೇಶ ಶಿವಳ್ಳಿ, ಸಂದೀಪ ಶಿವಳ್ಳಿ, ರಾಮಚಂದ್ರ ಶಿವಳ್ಳಿ, ಚಿನ್ಮಯ ಕಂಬಿಗಾರ, ಗಪ್ಪು ಮೂಡ್ಗಾರ, ನಾರಾಯಣ ಮೂಡ್ಗಾರ, ವಿನಾಯಕ ಹೆಗ್ಗಾರ ಹಾಗೂ ಪ್ರಭಾಕರ ತುಂಬೇಮನೆ ಪಾತ್ರ ನಿರ್ವಹಿಸಲಿದ್ದಾರೆ. ಸುನೇತ್ರಾ ಬೆಂಗಳೂರು, ಮಾಧುರಿ ತುಮಕೂರು ಹಾಗೂ ತೇಜು ಬಾದಾಮಿ ಸ್ತ್ರೀಪಾತ್ರಗಳಲ್ಲಿ ರಂಜಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next