ಕಾಪು: ಕಾಪು ಪೊಲಿಪು ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದ ಸ್ವರ್ಣ ಮಹೋತ್ಸವದ ಪ್ರಯುಕ್ತ ಮಕ್ಕಳ ಶ್ರೀ ಮಹಾಲಕ್ಷ್ಮೀ ದೇವಿಗೆ ಸ್ವರ್ಣ ಕವಚ ಮತ್ತು ರಜತ ಪ್ರಭಾವಳಿ, ಶ್ರೀ ಗಣಪತಿ ದೇವರಿಗೆ ರಜತ ಕವಚ ಸಮರ್ಪಣೆ, ಬ್ರಹ್ಮಕಲಶೋತ್ಸವ, ಮಹಾ ಅನ್ನ ಸಂತರ್ಪಣೆ ಮತ್ತು 50ನೇ ಭಜನ ಮಂಗಲೋತ್ಸವ ಕಾರ್ಯಕ್ರಮ ಎ. 21ರಿಂದ ಮೊದಲ್ಗೊಂಡು ಎ. 24ರ ವರೆಗೆ ನಡೆಯಲಿದೆ.
ಎ. 21ರಂದು ಸಂಜೆ 4ಕ್ಕೆ ಕಸ್ವರ್ಣ ಕವಚ ಮತ್ತು ರಜತ ಪ್ರಭಾವಳಿಯ ಸಮರ್ಪಣ ಮೆರವಣಿಗೆ ನಡೆಯಲಿದೆ. ಸಂಜೆ 6ರಿಂದ ದೇವತಾ ಪ್ರಾರ್ಥನೆ, ವಾಸ್ತು ಹೋಮ, ಸುದರ್ಶನ ಹೋಮ ನಡೆಯಲಿದೆ.
ಎ. 22ರಂದು ಬೆಳಗ್ಗೆ 7ರಿಂದ ಗಣಪತಿ ಹೋಮ, 10ರಿಂದ ಶ್ರೀ ದೇವರಿಗೆ ಬ್ರಹ್ಮಕಲಶ, ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7ಕ್ಕೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಮಿ ಡಾ| ನಾಡೋಜ ಜಿ. ಶಂಕರ್, ಸುರೇಶ್ ಶೆಟ್ಟಿ ಗುರ್ಮೆ, ದ. ಕ. ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಗಣ್ಯರಾದ ಮನೋಹರ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಕೆ. ವಾಸುದೇವ ಶೆಟ್ಟಿ, ಪ್ರಸಾದ್ ಜಿ. ಶೆಣೈ, ಪ್ರಭಾಕರ ಪೂಜಾರಿ, ವಿಕ್ರಂ ಕಾಪು, ಸಹನಾ ಕುಂದರ್, ರಮೇಶ್ ಗುತ್ತಿನಾರ್, ಪಿ.ಎಸ್.ಕೆ. ಮಲ್ಪೆ, ಶರತ್ ಎಲ್. ಕರ್ಕೇರ, ಸದಾನಂದ ಸಾಲ್ಯಾನ್, ಪ್ರವೀಣ್ ಡಿ. ಕುಂದರ್, ಪಾಂಡುರಂಗ ಜೆ. ಕೋಟ್ಯಾನ್ ಮೊದಲಾದವರು ಭಾಗವಹಿಸಲಿದ್ದಾರೆ.
ಎ. 23ರಂದು 12 ಗಂಟೆಗೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಎ. 24ರಂದು ಬೆಳಗ್ಗೆ 5ಕ್ಕೆ ಭಜನ ಮಂಗಳ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.