ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಈ ವರ್ಷದ ಜನವರಿ 19ರಿಂದ 31ರವರೆಗೆ 5 ಪುರುಷ ಪ್ರಯಾಣಿಕರಿಂದ 90 ಲಕ್ಷದ 34 ಸಾವಿರದ 970 ರೂ ಮೌಲ್ಯದ 1617 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
Advertisement
ದುಬೈನಿಂದ ಆಗಮಿಸಿದ ಪ್ರಯಾಣಿಕರು ಟ್ರಾಲಿ ಬ್ಯಾಗ್‌ನ ಬೀಡಿಂಗ್‌ನಲ್ಲಿ, ಗುದನಾಳದಲ್ಲಿ ಮರೆಮಾಚಿ ಮುಂತಾದ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದರು.
ದುಬೈನಿಂದ ಬಂದ ಪುರುಷ ಪ್ರಯಾಣಿಕರಿಂದ 6, 42,74o ಮೌಲ್ಯದ ಸಿಗರೇಟ್ ಮತ್ತು ಇ-ಸಿಗರೇಟ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.