ಧಾರವಾಡ: ಅಕ್ಷಯ ತೃತೀಯ ದಿನದಂದು ಚಿನ್ನದ ಬಿಸ್ಕತ್ ಖರೀದಿಸಲು ಬಂದಿದ್ದ ಚಿತ್ರದುರ್ಗದ ಇಬ್ಬರು ವ್ಯಕ್ತಿಗಳನ್ನು ಬೆದರಿಸಿ ಅವರಿಂದ 15 ಲಕ್ಷ ನಗದು ಕಿತ್ತುಕೊಂಡು ಪರಾರಿಯಾದ ಘಟನೆ ನಗರದ ರಜತಗಿರಿಯಲ್ಲಿ ಮಂಗಳವಾರ ನಡೆದಿದೆ.
ಇದಾದ ಬಳಿಕ ಚಿನ್ನದ ಬಿಸ್ಕತ್ ಖರೀದಿಸಲು ಮುಂದಾದ ರವಿಕುಮಾರ ಹಾಗೂ ಜಾಕೀರಹುಸೇನ, ಮನೆ ಮುಂದೆ ನಿಲ್ಲಿಸಿ ಬಂದಿದ್ದ ಕಾರಿನಿಂದ ಹಣದ ಬ್ಯಾಗ್ ತಂದು ಚಿನ್ನದ ಬಿಸ್ಕತ್ ನೀಡುವಂತೆ ಹೇಳಿದ್ದಾರೆ. ಆಗ ಚಿನ್ನದ ಬಿಸ್ಕತ್ ನೀಡದ ಪ್ರಕಾಶ, ಅವರ ಬಳಿಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಮುಂದಾಗಿದ್ದಾನೆ. ಇದಕ್ಕೆ ಅವರು ಪ್ರತಿರೋಧ ಒಡ್ಡಿದಾಗ ಪ್ರಕಾಶನ ಜೊತೆಗಿದ್ದ 8-10 ಜನ ಕೈಯಲ್ಲಿ ಚಾಕು ಹಿಡಿದು ಬೆದರಿಸಿ, ಅವರಿಂದ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿ ಆಗಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡವರು ದೂರು ನೀಡಿದ್ದಾರೆ.
Advertisement
ಚಿತ್ರದುರ್ಗದ ನಾಯಕನಹಟ್ಟಿಯ ಎಚ್.ಆರ್. ರವಿಕುಮಾರ, ಜಾಕೀರ ಹುಸೇನ ಹಣ ಕಳೆದುಕೊಂಡವರು. ರಜತಗಿರಿಯ ನಿವಾಸಿ ಪ್ರಕಾಶ ಎಂಬಾತನ ಮನೆಗೆ ಮಂಗಳವಾರ ಬೆಳಗ್ಗೆ ಅಕ್ಕಸಾಲಿಗ ರಾಜುವಿನ ಜೊತೆಗೆ ಚಿತ್ರದುರ್ಗದಿಂದ ಇವರಿಬ್ಬರು ಬಂದಿದ್ದಾರೆ. ಬೆಳಗ್ಗೆ ವ್ಯವಹಾರ ಹೊಂದಾಣಿಕೆಯಾಗದೇ ಹೋದಾಗ ಪ್ರಕಾಶ ಮರಳಿ ಸಂಜೆ ಬರುವಂತೆ ಹೇಳಿದ್ದಾನೆ. ಅದರಂತೆ ರವಿಕುಮಾರ 13 ಲಕ್ಷ ಹಾಗೂ ಜಾಕೀರಹುಸೇನ 3 ಲಕ್ಷ ಹಣ ತೆಗೆದುಕೊಂಡು ಮತ್ತೆ ಪ್ರಕಾಶ ಅವರ ಮನೆಗೆ ಸಂಜೆ ಬಂದಿದ್ದಾರೆ. ಆಗ ಪ್ರಕಾಶ 100 ಗ್ರಾಂ ತೂಕದ ಚಿನ್ನದ ಬಿಸ್ಕತ್ ನೀಡಿದ್ದು, ಇದನ್ನು ಪರೀಕ್ಷೆ ಮಾಡಿದ ಅಕ್ಕಸಾಲಿಗ ರಾಜು ಇದು ಚಿನ್ನವಿರುವುದಾಗಿ ಖಚಿತಪಡಿಸಿದ್ದಾನೆ.