ಕೋಟ: ಮಹಿಳೆಯೋರ್ವರು ಗೋವಾದ ಪಣಜಿಯಿಂದ ಸಾಸ್ತಾನ ಐರೋಡಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ತಂಡವೊಂದು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.
ಐರೋಡಿ ನಿವಾಸಿ ಸಂಗೀತಾ ಭಟ್ ಚಿನ್ನಾಭರಣ ಕಳೆದುಕೊಂಡವರು. ಅವರು ಕಳೆದ ಡಿ.24ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಪಣಜಿಯಿಂದ ಪುತ್ತೂರಿಗೆ ಹೊರಡುವ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಊರಿಗೆ ಪ್ರಯಾಣಿಸುತ್ತಿರುವಾಗ ಟ್ರಾಲಿ ಬ್ಯಾಗ್‌ನಲ್ಲಿ ಬಟ್ಟೆ ಬರೆ ಹಾಗೂ ಅದರ ಒಳಗಡೆ ಸಣ್ಣ ವಸ್ತ್ರದ ಚೀಲದಲ್ಲಿ ಚಿನ್ನಾಭರಣ ಇಟ್ಟು ಬ್ಯಾಗಿಗೆ ಬೀಗ ಹಾಕಿ ಕುಳಿತ ಸೀಟಿನ ಕೆಳಗಡೆ ಇಟ್ಟುಕೊಂಡಿದ್ದರು. ತನ್ನೂರು ಬಂದಾಗ ಮಾಬುಕಳದಲ್ಲಿ ಅವರು ಇಳಿದಿದ್ದು, ಮರುದಿನ ಬೆಳಗ್ಗೆ ಮನೆಯಲ್ಲಿ ಬ್ಯಾಗ್ ನೋಡಿದಾಗ ಅದರಲ್ಲಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿತ್ತು.
ಬಸ್‌ನಲ್ಲಿ ಹಿಂದೆ ಕುಳಿತಿರುವ ಹಿಂದಿ ಮಾತನಾಡುವ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ಮೂಡಿಬಂದಿರುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ಮೂಲಕ ದೂರು
ಗೋವಾದಿಂದ ಬರುವಾಗ ಕಳ್ಳರು ಯಾವ ಸ್ಥಳದಲ್ಲಿ ಕಳ್ಳತನ ಮಾಡಿ ಬಸ್‌ನಿಂದ ಇಳಿದಿದ್ದಾರೆ ಎನ್ನುವ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಯಾವ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎನ್ನುವುದು ತಿಳಿಯದೆ ಸಂತ್ರಸ್ತರು ಸಾಕಷ್ಟು ಪರದಾಡಿದ್ದಾರೆ. ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆಯಂತೆ ಕೋಟದಲ್ಲಿ ತಡವಾಗಿ ದೂರು ದಾಖಲಾಗಿದೆ. ಠಾಣಾಧಿಕಾರಿ ಮಧು ಬಿ. ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Related Articles
ಇದನ್ನೂ ಓದಿ: ಬ್ರಹ್ಮಾವರದಲ್ಲಿ ಅಪಘಾತ: ಪರೀಕ್ಷೆ ಬರೆದು ವಾಪಸ್ಸಾಗುತ್ತಿದ್ದ ವಿದ್ಯಾರ್ಥಿಗಳಿಬ್ಬರ ದುರ್ಮರಣ