Advertisement

20 ಸೆಕೆಂಡುಗಳಲ್ಲಿ 10 ಲಕ್ಷ ಮೌಲ್ಯದ ಚಿನ್ನದ ಸರ ಕದ್ದ ವೃದ್ಧೆ: ವೀಡಿಯೋ ವೈರಲ್

04:58 PM Nov 28, 2022 | Team Udayavani |

ಉತ್ತರ ಪ್ರದೇಶ: ವಯಸ್ಸಾದ ಮಹಿಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಮಹಿಳೆ ಆಭರಣ ಅಂಗಡಿಯಿಂದ ನೆಕ್ಲೇಸ್ ಅನ್ನು ಕದಿಯುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಆಕೆ ಕದ್ದ ಚಿನ್ನದ ಸರದ ಮೌಲ್ಯ 10 ಲಕ್ಷ ರೂಪಾಯಿಗಳಾಗಿವೆ. ಈ ವಯಸ್ಸಾದ ಮಹಿಳೆ  ಜಾಣ್ಮೆಯಿಂದ ಕೇವಲ 20 ಸೆಕೆಂಡುಗಳಲ್ಲಿ ಸರವನ್ನು ಕದ್ದು ತನ್ನ ಸೆರಗಿನೊಳಗೆ ಹಾಕಿಕೊಂಡಿದ್ದಾಳೆ.

Advertisement

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನವೆಂಬರ್ 17 ರಂದು ಮಹಿಳೆ ಬಲ್ ದೇವ್ ಪ್ಲಾಜಾದಲ್ಲಿರುವ ‘ಬೆಚು ಲಾಲ್ ಸರಾಫ್ ಪ್ರೈವೇಟ್ ಲಿಮಿಟೆಡ್‌’ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

 

ಆಕೆ ಆಭರಣಗಳನ್ನು ನೋಡುತ್ತಾ ಕುಳಿತಿದ್ದಳು ಮತ್ತು ಸೀರೆಯಲ್ಲಿ ಆಭರಣ ಪೆಟ್ಟಿಗೆಯನ್ನು ಹಾಕಲು ಕೇವಲ 10 ಸೆಕೆಂಡುಗಳ ಸಮಯ ತೆಗೆದುಕೊಂಡಿದ್ದಳು ಆದರೆ ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಆಕೆ ನೆಕ್ಲೇಸ್ ಕಳವು ಮಾಡಿರುವುದನ್ನು ಯಾರೂ ಗಮನಿಸಲಿಲ್ಲ ಮತ್ತು ಒಟ್ಟಾರೆ 20 ಸೆಕೆಂಡುಗಳ ಒಳಗೆ ಆಕೆಯು ಸಹಜವಾಗಿಯೇ ಆಭರಣದ ಅಂಗಡಿಯಿಂದ ಹೊರ ಹೋಗಿದ್ದಳು.!

Advertisement
Advertisement

Udayavani is now on Telegram. Click here to join our channel and stay updated with the latest news.

Next