ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಕೆಳಮದುರೆ ಮನೆ ರಾಘವೇಂದ್ರ ಯಡಿಯಾಳ(41) ಅವರ ಮನೆಗೆ ಜೂ.18ರ ರಾತ್ರಿವೇಳೆ ಮನೆಯ ಹಿಂಬದಿಯ ಹಟ್ಟಿಯ ಬಾಗಿಲು ತೆರೆದು ಒಳಪ್ರವೇಶಿಸಿದ ಕಳ್ಳರು, ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ನಡೆದಿದೆ.
ರಾಘವೇಂದ್ರ ಯಡಿಯಾಳ ಅವರ ತಾಯಿ ಸರಸ್ವತಿಯವರು ಮಲಗುವ ಕೋಣೆಯ ಗ್ರೋದ್ರೇಜ್ ಕಾಪಾಟಿನ ಬಾಗಿಲು ತೆರೆದ ಕಳ್ಳರು 1,30,000 ರೂ.ಬೆಲೆ ಬಾಳುವ 28 ಗ್ರಾಂ ತೂಕದ 2 ಚಿನ್ನದ ಬಳೆ, 1,50,000 ರೂ.ಬೆಲೆ ಬಾಳುವ 30ಗ್ರಾಂ ತೂಕದ ಮಲ್ಲಿಗೆ ಮಿಟ್ಟಿಯ ಸರ, 20ಸಾವಿರ ಬೆಲೆ ಬಾಳುವ 4ಗ್ರಾಂ ತೂಕದ ಚಿನ್ನದ ಉಂಗುರ, ಹಿತ್ತಾಳೆ ಕರಡಿಗೆ ಮತ್ತು ನಗದು 5ಸಾವಿರ ಒಟ್ಟು 3,05,000 ರೂ.ಕಳವು ಆಗಿದೆ ಎಂದು ರಾಘವೇಂದ್ರ ಯಡಿಯಾಳ ಅವರು ದೂರು ನೀಡಿದ್ದಾರೆ.
ಕಳ್ಳತನ ನಡೆದ ಸಮಯದಲ್ಲಿ ರಾಘವೇಂದ್ರ ಯಡಿಯಾಳ ಅವರು ವಯಸಾದ ತಾಯಿಯನ್ನು ಮನೆಯಲ್ಲಿ ಬಿಟ್ಟು, ಹೆಂಡತಿ ಮಕ್ಕಳೊಂದಿಗೆ ಸಿದ್ದಾಪುರ ಪೇಟೆಗೆ ಹೋಗಿದ್ದಾರೆ. ಈ ಸಮಯ ನೋಡಿಕೊಂಡು ಕಳ್ಳರು ಮನೆಯಲ್ಲಿರುವ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
…………………………………………………………………………………………………………………………………………………
Related Articles
ಮಚ್ಚಟ್ಟು: ಸ್ಕೂಟಿಗೆ ಸ್ಕೂಲ್ ಬಸ್ ಢಿಕ್ಕಿ
ಸಿದ್ದಾಪುರ: ಮಚ್ಚಟ್ಟು ಗ್ರಾಮದ ಹೆಮ್ಮಣ್ಣು ಮೂರುಕೈ ಬಳಿ ಜೂ.18ರಂದು ಸ್ಕೂಲ್ ಬಸ್ ಸ್ಕೂಟಿಗೆ ಢಿಕ್ಕಿಹೊಡೆದ ಪರಿಣಾಮ, ಸ್ಕೂಟಿ ಸವಾರ ಅಮಾಸೆಬೈಲು ಕೆಲ ಅಗವಾಡಿ ಪ್ರವೀಣ್ ಶೆಟ್ಟಿ(33) ಅವರು ಗಂಭೀರವಾಗಿ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಪಾರು: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು
ಸಿದ್ದಾಪುರ: ಕಂಡ್ಲೂರುನಲ್ಲಿ ಕಳೆದ 4ತಿಂಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ತೀವ್ರತರದಲ್ಲಿ ಗಾಯಗೊಂಡು ಗುಣಮುಖರಾದೇ ಮನೆಯಲ್ಲಿ ಅರೇ ಪ್ರಜ್ಞಾವಸ್ಥೆಯಲ್ಲಿದ್ದ ಅಂಪಾರು ಗ್ರಾಮದ ಉದ್ದಾರಗುಡ್ಡೆ ಕೆ. ಶಾಂತರಾಮ ಶೆಟ್ಟಿ(52) ಅವರು ಜೂ.18ರಂದು ಮೃತಪಟ್ಟಿದ್ದಾರೆ.
ಪತ್ನಿ ಭಾರತಿ ಶೆಟ್ಟಿ (47)ಅವರು ನೀಡಿರುವ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.