Advertisement

ಕಾಪು: ಫ್ಲ್ಯಾಟ್‌ನಿಂದ 1.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

08:35 PM Aug 11, 2022 | Team Udayavani |

ಕಾಪು: ಫ್ಲ್ಯಾಟ್‌ನಲ್ಲಿ ವಾಸವಿದ್ದ ಮನೆಯೊಡತಿ ತನ್ನ ತಂಗಿಯ ಮನೆಗೆ ತೆರಳಿದ್ದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು 1.98 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಮೂಳೂರಿನಲ್ಲಿ ನಡೆದಿದೆ.

Advertisement

ಮೂಳೂರು ಶ್ರೀ ಸಾಯಿ ವಾರ್ಚರ್‌ ಫ್ಲ್ಯಾಟ್‌ನಲ್ಲಿ ವಾಸವಿದ್ದ ಆರ್ಜ್ಯೂ ಸರ್ಫ್‌ರಾಜ್‌ ಅವರು ಆ. 8ರಂದು ಫ್ಲ್ಯಾಟ್‌ಗೆ ಬೀಗ ಹಾಕಿ ಉಡುಪಿಯಲ್ಲಿರುವ ತನ್ನ ತಂಗಿಯ ಮನೆಗೆ ತೆರಳಿದ್ದರು. ಈ ವೇಳೆ ಮನೆಯೊಳಗೆ ನುಗ್ಗಿದ್ದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದರು.

ಆರ್ಜ್ಯೂ ಸರ್ಫ್‌ರಾಜ್‌ ಆ. 10ರ ಬೆಳಗ್ಗೆ ತನ್ನ ಮನೆಗೆ ಬಂದು ನೋಡಿದಾಗ ಮನೆಯ ಕಪಾಟನ್ನು ತೆರೆದು ನೋಡುವಾಗ ಅದರ ಡ್ರಾಯರ್‌ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next