Advertisement

ಪ್ರತ್ಯೇಕ ಪ್ರಕರಣ: 90 ಲಕ್ಷ ರೂ.ನ ಚಿನ್ನ ಜಪ್ತಿ

02:31 PM Aug 13, 2022 | Team Udayavani |

ದೇವನಹಳ್ಳಿ: ವಿದೇಶದಿಂದ ಅಕ್ರಮ ಚಿನ್ನ ಸಾಗಾಣಿಕೆ ಮಾಡಲು ಯತ್ನಿಸಿದ ಇಬ್ಬರು ಸ್ಮಗ್ಲರ್‌ಗಳನ್ನು ಬೆಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಆರೋಪಿಗಳಿಂದ 90 ಲಕ್ಷ ರೂ.ನ 1.7 ಕೆ.ಜಿ ತೂಕದ ಚಿನ್ನ ವಶಕ್ಕೆ ಪಡೆಯಲಾಗಿದೆ. ಅನುಮಾನಾಸ್ಪದ ಓಡಾಟವನ್ನು ಗಮನಿಸಿದ ಕಸ್ಟಮ್ಸ್‌ ಅಧಿಕಾರಿಗಳು, ಓರ್ವ ಸ್ಮಗ್ಲರ್‌ನನ್ನು ತಪಾಸಣೆ ನಡೆಸಿದಾಗ ವಿಲಕ್ಷಣವಾದ ಒಳ ಉಡುಪಿಯಲ್ಲಿ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯಿಂದ 27 ಲಕ್ಷ ರೂ.ನ 519 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿದಿದೆ.

ಥೈಲ್ಯಾಂಡ್‌ ದೇಶದ ಫ‌ುಕೆಟ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 28 ವರ್ಷದ ಪ್ರಯಾಣಿಕನನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಆತ ಧರಿಸಿದ ಬಟ್ಟೆಯೊಳಗೆ 63 ಲಕ್ಷ ರೂ.ನ 18 ಚಿನ್ನದ ಬಿಸ್ಕೆಟ್‌ಗಳನ್ನು ಬಟ್ಟೆಯಲ್ಲಿ ಹೊಲಿಗೆ ಹಾಕಿ, ಅಕ್ರಮವಾಗಿ ಸಾಗಾಣಿಕೆ ಮಾಡಲು ಮುಂದಾಗಿದ್ದು, ವಶಕ್ಕೆ ಪಡೆದಿದ್ದಾರೆ.

ಮತ್ತೂಂದು ಪ್ರಕರಣದಲ್ಲಿ ಭರೈನ್‌ ದೇಶದ ಮನಮದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಕಸ್ಟಮ್ಸ್‌ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next