Advertisement

ಚಿನ್ನ –ಬೆಳ್ಳಿ ಬೆಲೆ ಏರಿಕೆ ; ಸೋಮವಾರ ದರ ಎಷ್ಟಿದೆ …

01:27 AM Jan 17, 2023 | Team Udayavani |

ಹೊಸದಿಲ್ಲಿ: ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 314 ರೂ. ಏರಿಕೆ ಕಂಡರೆ, ಬೆಳ್ಳಿ ಕೆ.ಜಿ. ದರದಲ್ಲಿ 1,173 ರೂ. ಏರಿಕೆ ಕಂಡಿದೆ.

Advertisement

ಹೊಸದಿಲ್ಲಿಯಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆಯು 56,701 ರೂ.ಗಳಿಗೆ ತಲುಪಿತು. ಇದು 9 ತಿಂಗಳಲ್ಲಿನ ಗರಿಷ್ಠ ಮಟ್ಟವಾಗಿದೆ. ಬೆಳ್ಳಿಯ ದರ 70 ಸಾವಿರ ರೂ.ಗಳನ್ನು ದಾಟಿ ನಿಂತಿದೆ.

ಒಂದು ಕೆ.ಜಿ. ದರ 70,054 ರೂ.ಗಳಿಗೆ ತಲುಪಿತು. ಮುಂಬಯಿಯಲ್ಲಿ ಚಿನ್ನದ ದರ 10 ಗ್ರಾಂಗೆ 56,790 ರೂ.ಗಳಿಗೆ ತಲುಪಿದರೆ, ಬೆಳ್ಳಿ ದರ ಕೆ.ಜಿ.ಗೆ 74,000 ಗಳಿಗೇರಿತ್ತು.

ಜಾಗತಿಕ ವಲಯದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದರಿಂದ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next