Advertisement

34 ಸಾವಿರದ ಗಡಿ ದಾಟಿದ ಚಿನ್ನದ ದರ

12:30 AM Jan 31, 2019 | |

ಹೊಸದಿಲ್ಲಿ: ಸಾಗರೋತ್ತರ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು ಹಳದಿ ಲೋಹದ ಮೇಲೆ ಭಾರೀ ಪ್ರಭಾವ ಬೀರುತ್ತಿದ್ದು, ಬುಧವಾರ ಒಂದೇ ದಿನ ಚಿನ್ನದ ದರ ಒಂದು ಗ್ರಾಂಗೆ 350 ರೂ. ಏರಿಕೆಯಾಗಿದೆ. ಮುಂಬಯಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 34,490 ರೂ. (22 ಕ್ಯಾರೆಟ್‌) ಆಗಿದೆ. ಶುದ್ಧ ಚಿನ್ನದ ದರ 10 ಗ್ರಾಂಗೆ 34,100 ರೂ. ಆಗಿದೆ. ಹೊಸದಿಲ್ಲಿಯಲ್ಲಿ ಗ್ರಾಂ.ಗೆ 320 ರೂ. ಏರಿಕೆ ಕಂಡು, 10 ಗ್ರಾಂ ಚಿನ್ನಕ್ಕೆ  34,070 ರೂ. ಆಗಿದೆ.

Advertisement

ಅಮೆರಿಕ ಮತ್ತು ಚೀನ ನಡುವಿನ ವ್ಯಾಪಾರ ಬಿಕ್ಕಟ್ಟು ಹಾಗೂ ಮಾತು ಕತೆಗೆ ಸಂಬಂಧಿ ಸಿದ ಅನಿಶ್ಚಿತತೆ, ಚೀನದ ದೂರ ಸಂಪರ್ಕ ದಿಗ್ಗಜ ಹುವಾಯಿ ವಿರುದ್ಧ ಕ್ರಿಮಿನಲ್‌ ವಿಚಾರಣೆಗೆ ಅಮೆ ರಿಕ ಆದೇಶಿ ಸಿರುವುದು ಸಹಿತ ಹಲವು ಬೆಳ ವಣಿಗೆ ಗಳು ಚಿನ್ನದ ದರ ಏರಿಕೆಗೆ ಕಾರಣ ವಾಗಿವೆ. ಹೀಗಾಗಿ 2 ದಿನಗಳಲ್ಲಿ ಚಿನ್ನದ ದರ ಗ್ರಾಂಗೆ ಒಟ್ಟು 450 ರೂ. ಏರಿಕೆ ಕಂಡಂತಾಗಿದೆ.

ಬೆಳ್ಳಿ ಕೂಡ ಇದೇ ಹಾದಿಯಲ್ಲಿ ಸಾಗಿದ್ದು, ಬುಧವಾರ 330 ರೂ. ಏರಿಕೆ ಕಂಡು, ಕೆ.ಜಿ.ಗೆ 41,330 ರೂ.ಗೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಔನ್ಸ್‌ಗೆ 1,314.76 ಡಾಲರ್‌ ಆಗಿದ್ದರೆ, ಬೆಳ್ಳಿ ದರ ಔನ್ಸ್‌ಗೆ 15.96 ಡಾಲರ್‌ಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next