ನವದೆಹಲಿ:ಕೋವಿಡ್ ಸಂಕಷ್ಟದ ಕಾಲದ ನಡುವೆ ದೇಶದಲ್ಲಿ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದೀಗ ಕಳೆದ ಎರಡು ದಿನಗಳಲ್ಲಿ ಹಳದಿ ಲೋಹ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ ಹಾಗೂ ಶೇರುಮಾರುಕಟ್ಟೆಯಲ್ಲಿ ಕೆಲವು ಹೂಡಿಕೆದಾರರಿಗೆ ಹೆಚ್ಚಿನ ಲಾಭವಾದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದಾಗಿ ವರದಿ ವಿವರಿಸಿದೆ.
ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4,500 ರೂಪಾಯಿ ಹಾಗೂ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 5 ಸಾವಿರ ರೂಪಾಯಿ ಇಳಿಕೆಯಾಗಿರುವುದಾಗಿ ವರದಿ ತಿಳಿಸಿದೆ. ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್ (ಎಂಸಿಎಕ್ಸ್) ಪ್ರಕಾರ ಅಕ್ಟೋಬರ್ ನಲ್ಲಿ ಫ್ಯೂಚರ್ ಗೋಲ್ಡ್ ಬೆಲೆಯಲ್ಲಿ ಶೇ.3ರಷ್ಟು (1,500 ರೂಪಾಯಿ) ಬೆಲೆ ಇಳಿಕೆಯಾಗಲಿದೆ. ಬೆಳ್ಳಿ ಬೆಲೆಯಲ್ಲಿ ಶೇ.5ರಷ್ಟು (5000) ಬೆಲೆ ಕಡಿತವಾಗಲಿದೆ ಎಂದು ತಿಳಿಸಿದೆ.
ಕಳೆದ ವಾರ ಭಾರತದಲ್ಲಿ ಹತ್ತು ಗ್ರಾಂ ಶುದ್ಧ ಚಿನ್ನದ ಬೆಲೆ 56,000 ಸಾವಿರ ರೂಪಾಯಿಗೆ ತಲುಪಿದ್ದು, ಬೆಳ್ಳಿ ಕೆಜಿಗೆ 78,000 ಸಾವಿರ ರೂಪಾಯಿಗೆ ಏರಿಕೆಯಾಗಿತ್ತು. ಮಂಗಳವಾರ ಮತ್ತು ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು, ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು ಎಂಬ ವಿವರ ಇಲ್ಲಿ ನೀಡಲಾಗಿದೆ…
ಚೆನ್ನೈ-22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 53,150 (24 ಕ್ಯಾರೆಟ್ ಗೆ 58,040 ರೂಪಾಯಿ)
ಮುಂಬೈ-22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 53,390 (24 ಕ್ಯಾರೆಟ್ ಗೆ 54,390 ರೂಪಾಯಿ)
ದೆಹಲಿ-22 ಕ್ಯಾರೆಟ್ (ಹತ್ತು ಗ್ರಾಂ) ಚಿನ್ನದ ಬೆಲೆ 53,460(24 ಕ್ಯಾರೆಟ್ ಗೆ 54,710 ರೂಪಾಯಿ)
ಕೋಲ್ಕತಾ-22 ಕ್ಯಾರೆಟ್ (ಹತ್ತು ಗ್ರಾಂ)ಚಿನ್ನದ ಬೆಲೆ 53,890(24 ಕ್ಯಾರೆಟ್ ಗೆ 55,290ರೂಪಾಯಿ)
ಬೆಂಗಳೂರು-22 ಕ್ಯಾರೆಟ್ (ಹತ್ತು ಗ್ರಾಂ)ಚಿನ್ನದ ಬೆಲೆ 51,880(24 ಕ್ಯಾರೆಟ್ ಗೆ 56,650 ರೂಪಾಯಿ)
ಹೈದರಾಬಾದ್-22 ಕ್ಯಾರೆಟ್ (ಹತ್ತು ಗ್ರಾಂ)ಚಿನ್ನದ ಬೆಲೆ 53,010(24 ಕ್ಯಾರೆಟ್ ಗೆ 58,040)
ಕೇರಳ-22ಕ್ಯಾರೆಟ್ (ಹತ್ತು ಗ್ರಾಂ)ಚಿನ್ನದ ಬೆಲೆ 51,010(24 ಕ್ಯಾರೆಟ್ ಗೆ 55,260 ರೂಪಾಯಿ)