Advertisement

ವರ್ಷದಲ್ಲಿ ಚಿನ್ನದ ಬೆಲೆ ಶೇ.40ರಷ್ಟು ಏರಿಕೆ

10:25 AM Jul 14, 2020 | mahesh |

ಮುಂಬಯಿ: ಭಾರತೀಯರ ಪಾಲಿಗೆ ಸಾರ್ವಕಾಲಿಕ ಸುರಕ್ಷಿತ ಹೂಡಿಕೆ ಚಿನ್ನ. ಉಳಿದ ಯಾವುದೇ ರೀತಿಯ ಹೂಡಿಕೆಗಳು ಕೈಕೊಟ್ಟರೂ ಇದು ಮಾತ್ರ ತನ್ನ ಬೆಲೆ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆಯಿಂದ, ಚಿನ್ನವನ್ನು ಕೊಂಡಿಟ್ಟುಕೊಳ್ಳುತ್ತಾರೆ. ಈಗ ಕೋವಿಡ್ ಕಾಲದಲ್ಲಿ ಅದಕ್ಕೆ ಪುರಾವೆಯೂ ಸಿಕ್ಕಿದೆ. 2019ರ ಜುಲೈನಿಂದ ಇಲ್ಲಿಯವರೆಗೆ 10 ಗ್ರಾಮ್‌ ಚಿನ್ನದ ಬೆಲೆಯಲ್ಲಿ ಶೇ.40ರಷ್ಟು ಏರಿಕೆಯಾಗಿದೆ. ಕಳೆದವರ್ಷ 10 ಗ್ರಾಮ್‌ಗೆ ಇದ್ದ ಬೆಲೆ 39,000 ರೂ. ಈ ವರ್ಷ ಅದು 49,000 ರೂ.ಗೇರಿದೆ! ಈ ಬೆಲೆ ಏರುತ್ತಲೇ ಸಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದುವರೆಗೆ ಚಿನ್ನದ ಕಡೆ ತಲೆ ಹಾಕದಿದ್ದವರೂ, ನಷ್ಟದ ಪ್ರಮಾಣ ಕಡಿಮೆಯಿರುವ ಚಿನ್ನದತ್ತ ಮುಖ ಮಾಡುತ್ತಿದ್ದಾರಂತೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next