ನವದೆಹಲಿ: 2008-2009ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೆ ಅಲ್ಲೋಲಕಲ್ಲೋವಾಗತೊಡಗಿದೆ. 2023ರಲ್ಲಿಯೂ ವಿಶ್ವದಲ್ಲಿ ಆರ್ಥಿಕ ಹಿಂಜರಿತ ಉಂಟಾಗಬಹುದು ಎಂದು ತಜ್ಞರ ಲೆಕ್ಕಚಾರದ ನಡುವೆ “ಹಳದಿ” ಲೋಹಕ್ಕೆ ಬೇಡಿಕೆ ಹೆಚ್ಚಾಗತೊಡಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯೂ ಗಗನಕ್ಕೇರತೊಡಗಿದೆ.
ಇದನ್ನೂ ಓದಿ:ಬೆಳ್ಳಿ ಪ್ರಕಾಶ್ ಗೆಲುವಿಗೆ ಪೂರ್ಣ ಆಸ್ತಿಯನ್ನು ಬಾಜಿ ಕಟ್ಟಲು ಮುಂದಾದ ಮುಖಂಡ
ಮಲ್ಟಿ ಕಮೋಡಿಟಿ ಎಕ್ಸ್ ಚೇಂಚ್ ಪ್ರಕಾರ, ಸೋಮವಾರ 10 ಗ್ರಾಮ್ ಚಿನ್ನದ ಬೆಲೆ ದಾಖಲೆ ಮಟ್ಟದ 60,274ರೂಪಾಯಿಗೆ ಏರಿಕೆಯಾಗಿರುವುದಾಗಿ ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2,000 ಡಾಲರ್ ಗಡಿ ದಾಟಿರುವುದಾಗಿ ವರದಿ ವಿವರಿಸಿದೆ.
ಮೆಹ್ತಾ ಈಕ್ವಿಟೀಸ್ ನ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ ಅವರ ಪ್ರಕಾರ, ಅಮೆರಿಕದ ಪ್ರತಿಷ್ಠಿತ ಬ್ಯಾಂಕ್ ಗಳು ಪತನಗೊಂಡ ನಂತರ ಬಂಗಾರದ ಬೆಲೆ ಭಾರೀ ಏರಿಕೆ ಕಾಣತೊಡಗಿದೆ. ಷೇರು ಮಾರುಕಟ್ಟೆಯಲ್ಲಿಯೂ ಷೇರು ಬೆಲೆ ಕುಸಿಯತೊಡಗಿದ್ದು, ಅಮೆರಿಕದ ಬಾಂಡ್ ದರ ಕೂಡಾ ಇಳಿಕೆಯಾಗಿದೆ. ಏತನ್ಮಧ್ಯೆ ಚಿನ್ನದ ಬೆಲೆ ಗಗನಕ್ಕೇರತೊಡಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ 60,370 ರೂಪಾಯಿ. ಒಂದು ಗ್ರಾಮ್ ಚಿನ್ನದ ಬೆಲೆ 6,037 ರೂಪಾಯಿ. 22 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ 55,350 ರೂಪಾಯಿಯಾಗಿದ್ದು, ಒಂದು ಗ್ರಾಮ್ ಚಿನ್ನದ ಬೆಲೆ 5,535 ರೂಪಾಯಿ.
ಚೆನ್ನೈನಲ್ಲಿ 24 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ 60,650 ರೂಪಾಯಿ, 22 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ 55,600 ರೂಪಾಯಿ.
ಮುಂಬೈನಲ್ಲಿ 24 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ 59,780 ರೂಪಾಯಿ, 22 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ 54,800 ರೂಪಾಯಿಯಾಗಿದೆ. ದೆಹಲಿಯಲ್ಲಿ 24 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ 59, 930 ರೂಪಾಯಿ, 22 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ 54, 950 ರೂಪಾಯಿ.