ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಹಣ ಕಳ್ಳತನ: ಓಜಿಕುಪ್ಪಂ ಗ್ಯಾಂಗ್ ಸದಸ್ಯರ ಸೆರೆ
Team Udayavani, Jan 16, 2025, 12:10 PM IST
ಬೆಂಗಳೂರು: ಬ್ಯಾಂಕ್ನಿಂದ ಹೊರಬರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಗಮನ ಬೇರೆಡೆ ಸೆಳೆದು ನಗದು ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಓಜಿಕುಪ್ಪಂ ಗ್ಯಾಂಗ್ನ ಮೂವರು ಸದಸ್ಯರನ್ನು ಕೆ.ಆರ್.ಪುರ ಮತ್ತು ಕೊತ್ತನೂರು ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಓಜಿಕುಪ್ಪಂನ ಗೋಪಿ (35), ಅಭಿಷೇಕ್ (36) ಹಾಗೂ ಅಂಕಿತ್(36) ಬಂಧಿತರು. ಆರೋಪಿಗಳಿಂದ 46 ಲಕ್ಷ ರೂ. ಚಿನ್ನಾಭರಣ, ನಗದು ಜಪ್ತಿ ಮಾಡಲಾಗಿದೆ.
ದೇವಸಂದ್ರದ ನಿವಾಸಿಯೊಬ್ಬರು ನ.29 ರಂದು ಬ್ಯಾಂಕ್ನಿಂದ 4 ಲಕ್ಷ ರೂ. ಡ್ರಾ ಮಾಡಿ ಕಾರಿನಲ್ಲಿ ಹೋಗುತ್ತಿದ್ದಾಗ ಟಿ.ಸಿ.ಪಾಳ್ಯದ ಹತ್ತಿರ ಎರಡು ದ್ವಿಚಕ್ರ ವಾಹನಗಳಲ್ಲಿ ಕಾರು ಹಿಂಬಾಲಿಸಿದ ಆರೋಪಿಗಳು, ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರಿನ ಟೈಯರ್ ಪಂಚರ್ ಆಗಿದೆ ಎಂದು ಗಮನ ಬೇರೆಡೆ ಸೆಳೆದಿದ್ದಾರೆ. ಬಳಿಕ ಪಂಕ್ಚರ್ ಶಾಪ್ನಲ್ಲಿ ಪಂಚರ್ ಹಾಕಿಸಿ ಹಣ ಕೊಡಲು ಹೋದಾಗ ಕಾರಿನ ಡ್ಯಾಶ್ಬೋರ್ಡ್ನಲ್ಲಿದ್ದ 4 ಲಕ್ಷ ರೂ. ಕಳವು ಮಾಡಿದ್ದ. ಈ ಬಗ್ಗೆ ಕೆ.ಆರ್.ಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಪಿ ಮತ್ತು ಅಂಕಿತ್ನನ್ನು ಬಂಧಿಸಿದ್ದಾರೆ. ಆತನಿಂದ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿ ಮಾಡಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಇದೇ ಆರೋಪಿಗಳು 2024ರ ಮೇ 16ರಂದು ಮಹಿಳೆಯೊಬ್ಬರು ಬ್ಯಾಂಕ್ನ ಲಾಕರ್ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತೆಗೆದುಕೊಂಡು ಬ್ಯಾಂಕ್ ಮುಂಭಾಗದ ಹೋಗುವಾಗ ಬೈಕ್ನಲ್ಲಿ ಬಂದು ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. ಕೆಲ ದಿನಗಳ ಬಳಿಕ ಇದೇ ತಂಡ ವೃದ್ಧರೊಬ್ಬರು ಬ್ಯಾಂಕ್ನಿಂದ ಹಣ ಬಿಡಿಸಿಕೊಂಡು ಬ್ಯಾಗ್ನಲ್ಲಿ ತೆಗೆದುಕೊಂಡು ಹೋಗುವಾಗ ಹಿಂಬಾಲಿಸಿ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿದಾಗ ತಲೆಮರೆಸಿ ಕೊಂಡಿದ್ದ ಅಭಿಷೇಕ್ನನ್ನು ಬಂಧಿಸಲಾಗಿದೆ. ಈತನಿಂದ 33.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro: ಮೆಟ್ರೋ ದರ ಹೆಚ್ಚಳ: ಮಾಹಿತಿ ಕೇಳಿದ ಕೇಂದ್ರ ಸರ್ಕಾರ
Actor Darshan: ಗನ್ ಪರವಾನಗಿ ರದ್ದು: ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್
Micro Finance: ಫೈನಾನ್ಸ್ ಕಿರುಕುಳದ ವಿರುದ್ಧ ದೂರಿತ್ತರೆ ಕ್ರಮ: ಕಮಿಷನರ್
Bengaluru; ಅಪ್ರಾಪ್ತೆಗೆ ಅಶ್ಲೀ*ಲ ಚಿತ್ರ ತೋರಿಸಿ ಕಿರುಕುಳ ಕೊಡುತ್ತಿದ್ದವನಿಗೆ ಥಳಿತ
Theft Case: ಟೈಂ ಪಾಸ್ಗಾಗಿ ಬೈಕ್ ಕದಿಯುತ್ತಿದ್ದ ತರಕಾರಿ ವ್ಯಾಪಾರಿ ಪೊಲೀಸರ ಬಲೆಗೆ