Advertisement

ಮೂಡಿಗೆರೆ: ಡಾ.ಬಿ.ಪಿ.ಅಮೃತ್ ಪಟೇಲ್ ಗೆ ಚಿನ್ನದ ಪದಕ

04:11 PM Jul 05, 2022 | Team Udayavani |

ಮೂಡಿಗೆರೆ: ತಾಲ್ಲೂಕಿನ ಬೈರಾಪುರದ ವೈದ್ಯ ಡಾ.ಬಿ.ಪಿ.ಅಮೃತ್ ಪಟೇಲ್ ಗೆ ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

Advertisement

ಮೂಡಿಗೆರೆ ತಾಲ್ಲೂಕಿನ ಬೈರಾಪುರದ ಪಟೇಲ್ ಪದ್ಮೇಗೌಡ ಹಾಗೂ ಕಲಾವತಿ ದಂಪತಿಯ ಪುತ್ರ.

ವೈದ್ಯ ಡಾ.ಬಿ.ಪಿ.ಅಮಿತ್ ಪಟೇಲ್ ಬೆಂಗಳೂರಿನ ಬಿಎಂಸಿಯಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡು ದೆಹಲಿಯ ಎಐಐಎಂಎಸ್ ಎಂಡಿ ಪದವಿ ಗಳಿಸಿದ್ದಾರೆ.

ದೆಹಲಿಯ ರಾಜೀವ್ ಗಾಂಧಿ   ಕ್ಯಾನ್ಸರ್  ಇನ್ ಸ್ಟಿಟ್ಯೂಟ್  ಎಂಡ್ ರೀಸರ್ಚ್ ಸೆಂಟರ್ ನಲ್ಲಿ ಕ್ಯಾನ್ಸರ್ ವಿಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಪದವಿ ಪಡೆದು ಚಿನ್ನದ ಪದಕ ಪಡೆದಿರುವುದು ಮಲೆನಾಡಿಗೆ ಹೆಮ್ಮೆಯ ವೈದ್ಯ ಎನಿಸಿಕೊಂಡಿದ್ದಾರೆ. ಇವರ ಸಾಧನೆಗೆ ಮೂಡಿಗೆರೆಯ ಬೈರಾಪುರದ ಜನತೆ ಹಾಗೂ ಪೋಷಕರು ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next