Advertisement

ಈಜು ಪಟುಗಳಿಗೆ ಬಂಗಾರದ ಪದಕ

12:41 PM Jun 08, 2022 | Team Udayavani |

ಕಲಬುರಗಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಕಲಬುರಗಿ ಈಜುಪಟುಗಳು ಉತ್ತಮ ಸಾಧನೆ ಮಾಡುವ ಮೂಲಕ ಎರಡು ಬಂಗಾರ, ಎರಡು ಬೆಳ್ಳಿ, ಒಂದು ಕಂಚಿನ ಪದಕ ತಮ್ಮದಾಗಿಸಿಕೊಂಡು ಜಿಲ್ಲೆಯ ಹೆಸರು ಮಿನುಗುವಂತೆ ಮಾಡಿದ್ದಾರೆ.

Advertisement

ಕ್ರೀಡಾಕೂಟದಲ್ಲಿ ಕಲಬುರಗಿ ಸರಕಾರಿ ನೌಕರರ ಸಂಘದ ವತಿಯಿಂದ ಭಾಗವಹಿಸಿ 45 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಭಾಗೀಯ ಆಹಾರ ಪ್ರಯೋಗಾಲಯದ ಹಿರಿಯ ಆಹಾರ ವಿಶ್ಲೇಷಣಾ ಅಧಿಕಾರಿ ಲೋಕೇಶ ಪೂಜಾರ 50ಮೀ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಬಂಗಾರ, 50ಮೀ ಫ್ರೀಸ್ಟೈ ಲ್‌ನಲ್ಲಿ ಬೆಳ್ಳಿ ಹಾಗೂ 50ಮೀ ಬಟರ್‌ ಫ್ಲೈನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಮಹಿಳಾ ವಿಭಾಗದಲ್ಲಿ ಪಶುಸಂಗೋಪನಾ ಇಲಾಖೆಯ ರೇಖಾ ವೈ. 100ಮೀ ಬಟರ್‌ ಫ್ಲೈನಲ್ಲಿ ಬಂಗಾರ, 100ಮೀ ಬ್ಯಾಕ್‌ ಸ್ಟ್ರೋಕ್‌, 50 ಮೀ. ಬಟರ್‌ ಫ್ಲೈನಲ್ಲಿ ಕಂಚಿನ ಪದಕಕ್ಕೆ ಭಾಗಿಯಾಗಿದ್ದಾರೆ.

ಇವರ ಸಾಧನೆಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ, ಸನ್‌ ಸಿಟಿ ಈಜು ಸಂಸ್ಥೆ ಹಾಗೂ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಈಜುಕೊಳ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next