Advertisement
2020-21 ನೇ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಪ್ರಮಾಣ ಶೇಕಡಾ. 22.58ರಷ್ಟು ಏರಿಕೆಯಾಗಿದೆ. ಆ ಮೂಲಕ 2020-21ರಲ್ಲಿ ಭಾರತಕ್ಕೆ ಒಟ್ಟು 34.6 ಬಿಲಿಯನ್ ಅಂದರೆ ಸುಮಾರು 2.54 ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ಚಿನ್ನದ ಆಮದು ಆದಂತಾಗಿದೆ.
Related Articles
Advertisement
ಹಣಕಾಸು ವರ್ಷದಲ್ಲಿ ಬೆಳ್ಳಿ ಆಮದು ಶೇಕಡಾ 71 ರಷ್ಟಿದ್ದ ಇಳಿದು ಸುಮಾರು 791 ದಶಲಕ್ಷ ಡಾಲರ್ ಗೆ ತಲುಪಿದೆ. ಆದಾಗ್ಯೂ, ಚಿನ್ನದ ಆಮದಿನಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯ ಹೊರತಾಗಿಯೂ, 2020-21ರ ವರ್ಷದಲ್ಲಿ ದೇಶದ ವ್ಯಾಪಾರ ಕೊರತೆ 98.56 ಬಿಲಿಯನ್ ಆಗಿದ್ದು, 2019-20ರಲ್ಲಿ 161.3 ಬಿಲಿಯನ್ ಆಗಿತ್ತು.
ಈ ಬಗ್ಗೆ ಬಿಜೆನೆಸ್ ವರ್ಲ್ಡ್ ಗೆ ಪ್ರತಿಕ್ರಿಯಿಸಿದ ಜೆಮ್ ಮತ್ತು ಜ್ಯುವೆಲ್ಲರಿ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಅಧ್ಯಕ್ಷ ಕಾಲಿನ್ ಶಾ, ”ದೇಶೀಯ ಬೇಡಿಕೆ ಹೆಚ್ಚುತ್ತಿರುವ ಕಾರಣ ಚಿನ್ನದ ಆಮದು ಹೆಚ್ಚುತ್ತಿದೆ” ಎಂದು ಹೇಳಿದ್ದಾರೆ.
ಅಲ್ಲದೆ, ಮುಂಬರುವ ದಿನಗಳಲ್ಲಿ ಅಕ್ಷಯ ತೃತೀಯ ಮತ್ತು ವಿವಾಹದ ಋತುವಿನಿಂದಾಗಿ, ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಿಎಡಿ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಸಿಎಡಿ ಎಂದರೆ ವಿದೇಶಿ ಕರೆನ್ಸಿಯ ಒಳಹರಿವು ಮತ್ತು ಹೊರಹರಿವಿನ ನಡುವಿನ ವ್ಯತ್ಯಾಸವಾಗಿದೆ ವರದಿ ತಿಳಿಸಿದೆ.
ಓದಿ : ಲಾಕ್‌ಡೌನ್ ಆತಂಕ ಹಿನ್ನೆಲೆ: ಕೃಷ್ಣ ಟಾಕೀಸ್ ಪ್ರದರ್ಶನ ಬಂದ್