Advertisement

ಅಲ್ಪ ಅವಧಿಯಲ್ಲಿ ಹಾಲ್ ಮಾರ್ಕಿಂಗ್ ಯಶಸ್ವಿ : ಬಿಐಎಸ್

02:17 PM Aug 23, 2021 | |

ನವ ದೆಹಲಿ : ಅಲ್ಪ ಅವಧಿಯಲ್ಲಿಯೇ ಕೇಂದ್ರದ ಹಾಲ್ ​ಮಾರ್ಕಿಂಗ್​ ಯೋಜನೆ ಯಶಸ್ವಿಯಾಗಿದೆ. ಈ ಯೋಜನೆಯಡಿಯಲ್ಲಿ ಈಗಾಗಲೇ . 90,000ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ನೋಂದಾವಣಿ ಮಾಡಿಕೊಂಡಿದ್ದು, ಅದಾಗಲೇ ಒಂದು ಕೋಟಿಗೂ ಹೆಚ್ಚು ಆಭರಣಗಳಿಗೆ ಹಾಲ್​ಮಾರ್ಕ್​​ ಹಾಕಲಾಗಿದೆ ಎಂದು ಬಿಐಎಸ್ ಮಾಹಿತಿ ನೀಡಿದೆ.

Advertisement

ಭಾರತದಲ್ಲಿ ಹಾಲ್ ​ಮಾರ್ಕಿಂಗ್​ ಪ್ರಗತಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಿಐಎಸ್ ಮಹಾನಿರ್ದೇಶಕ ಪ್ರತಿಕ್ರಿಯಿಸಿದ್ದು, ನೋಂದಾಯಿತ ಆಭರಣಕಾರರ ಸಂಖ್ಯೆ 91,603 ಕ್ಕೂ ಹೆಚ್ಚಾಗಿದೆ. 2021 ಜುಲೈ 1 ರಿಂದ ಆಗಸ್ಟ್ 20ರವರೆಗೆ 1ಕೋಟಿ 17 ಲಕ್ಷ ಆಭರಣಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ 1 ಕೋಟಿಗೂ 2 ಲಕ್ಷ ಆಭರಣಗಳಿಗೆ ಹಾಲ್​ಮಾರ್ಕ್​ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶೂಟಿಂಗ್ ವೇಳೆ ಗಾಯ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ದಾಖಲು 

.ಕಳೆದ ಜುಲೈ 1ರಿಂದ 15ರವರೆಗೆ 14.28 ಲಕ್ಷ ಆಭರಣಗಳಿಗೆ ಹಾಲ್​ಮಾರ್ಕ್​ ಹಾಕಲಾಗಿದೆ. ನಂತರ ಆಗಸ್ಟ್​ 1 ರಿಂದ 15 ರ ಅವಧಿಯಲ್ಲಿ ಹಾಲ್ ಮಾರ್ಕ್ ಹಾಕಿದ ಾಭರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

ಆಭರಣದ ಉದ್ಯಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಎಎಚ್​​ಸಿ ಹೊಂದಿರುವ 256 ಜಿಲ್ಲೆಗಳಲ್ಲಿ ಮಾತ್ರ ಹಾಲ್ಮಾರ್ಕ್ ಕಡ್ಡಾಯಗೊಳಿಸಲಾಗಿದೆ.  ಇನ್ನು,  ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ, ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗಿದೆ.

Advertisement

ಇನ್ನು, ಹಾಲ್​ ಮಾರ್ಕಿಂಗ್​ ಗೆ 20, 23 ಮತ್ತು 24 ಕ್ಯಾರೆಟ್ ಚಿನ್ನದ ಆಭರಣಗಳನ್ನು ಅನುಮತಿಸಲಾಗಿದೆ. ಭಾರತೀಯ ಮಾನದಂಡವನ್ನು ತಿದ್ದುಪಡಿ ಮಾಡಲಾಗಿದ್ದು, ಒಂದೇ ರೀತಿಯ ಶುದ್ಧತೆಯ ಸಣ್ಣ ವಿಶ್ರಣಗಳಿಗೂ ಸಹ ಹಾಲ್ ​ಮಾರ್ಕಿಂಗ್ ಅನುಮತಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :  ವರ್ಷದ ಬಳಿಕ ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಾಂಪ್ರದಾಯಿಕ ಸ್ವಾಗತ

Advertisement

Udayavani is now on Telegram. Click here to join our channel and stay updated with the latest news.

Next