Advertisement

ಕಾಮನ್‌ವೆಲ್ತ್‌ ಶೂಟಿಂಗ್‌: ರಿಜ್ವಿ , ಪೂಜಾಗೆ ಚಿನ್ನ

07:36 AM Nov 02, 2017 | Team Udayavani |

ಬ್ರಿಸ್ಟನ್‌: ಭಾರತೀಯ ಪಿಸ್ತೂಲ್‌ ಶೂಟರ್‌ಗಳು ಇಲ್ಲಿ ಸಾಗುತ್ತಿರುವ ಕಾಮನ್‌ವೆಲ್ತ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕ್ಲೀನ್‌ಸ್ವೀಪ್‌ ಸಾಧನೆ ಮಾಡಿದ್ದಾರೆ. ಶಾಜರ್‌ ರಿಜ್ವಿ, ಓಂಕಾರ್‌ ಸಿಂಗ್‌ ಮತ್ತು ಜಿತು ರಾಯ್‌ ಅನು ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದು ಮಿಂಚಿದರು.

Advertisement

ವನಿತೆಯರ 10 ಮೀ. ಏರ್‌ ರೈಫ‌ಲ್‌ ವಿಭಾಗದಲ್ಲಿ ಭಾರತದ ಪೂಜಾ ಘಾಟ್ಕರ್‌ ಚಿನ್ನ ಗೆದ್ದರೆ ಅಂಜುಮ್‌ ಮೌಡ್ಗಿಲ್‌ ಬೆಳ್ಳಿ ಪಡೆದರು. ಕಂಚಿನ ಪದಕ ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೊಸೊ ಅವರ ಪಾಲಾಯಿತು.

ಸ್ಪರ್ಧೆಯ ದ್ವಿತೀಯ ದಿನ ಭಾರತ ಎರಡು ಚಿನ್ನ ಸಹಿತ ಐದು ಪದಕ ಜಯಿಸಿದೆ. ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಇದರಲ್ಲಿ ಸೇರಿದೆ. ಸ್ಪರ್ಧೆಯ ಮೊದಲ ದಿನ ಹೀನಾ ಸಿದು ಅವರು 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಚಿನ್ನ ಜಯಿಸಿದ್ದರೆ 10 ಮೀ. ಏರ್‌ ರೈಫ‌ಲ್‌ನಲ್ಲಿ ದೀಪಕ್‌ ಕುಮಾರ್‌ ಬೆಳ್ಳಿ ಪಡೆದಿದ್ದರು.  ಸಿದು ಒಟ್ಟು 626.1 (386+240.8) ಅಂಕ ಗಳಿಸುವ ಮೂಲಕ ಚಿನ್ನ ಗೆದ್ದರು. ಇದು ಸಿದು ಅವರ ಎರಡನೇ ಅಂತಾರಾಷ್ಟ್ರೀಯ ಕೂಟದ ಚಿನ್ನದ ಪದಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next